ಕೋಲ್ಕತ್ತ: ‘ಟೀಮ್ ಇಂಡಿಯಾ ಪರ ನಾನು ಬ್ಲೂ (ನೀಲಿ) ಜೆರ್ಸಿ ಧರಿಸುವುದಕ್ಕೆ ಮತ್ತು ಗಳಿಸಿದ ಯಶಸ್ಸಿನಲ್ಲಿ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪ್ರಮುಖ ಪಾತ್ರವಹಿಸಿದೆ’ ಎಂದು ಭಾರತದ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 2022ರ ಆವೃತ್ತಿಗೆ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ವೆಂಕಟೇಶ್ ಅಯ್ಯರ್ (8 ಕೋಟಿ) ಅವರನ್ನು ಕೆಕೆಆರ್ ಫ್ರಾಂಚೈಸಿ ಉಳಿಸಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಕೆಕೆಆರ್ ತಂಡಕ್ಕೆ ಮರಳಲು ನನಗೆ ಸಂತೋಷವಾಗುತ್ತಿದೆ. ನಾನು ಬ್ಲೂ (ನೀಲಿ) ಜೆರ್ಸಿ ಧರಿಸುವುದಕ್ಕೆ ಫ್ರಾಂಚೈಸಿ ಮುಖ್ಯ ಪಾತ್ರವಹಿಸಿದೆ. ಈಡನ್ ಗಾರ್ಡನ್ಸ್‌ನಲ್ಲಿ ಕಣಕ್ಕಿಳಿಯಲು ಎದುರು ನೋಡುತ್ತಿದ್ದೇನೆ. ಇಲ್ಲಿ ಆಡುವುದು ನನಗೆ ಯಾವಾಗಲೂ ವಿಶೇಷವೆನಿಸುತ್ತದೆ’ ಎಂದಿದ್ದಾರೆ.
ಅಯ್ಯರ್ ಸೇರಿದಂತೆ ಆ್ಯಂಡ್ರೆ ರಸೆಲ್ (12 ಕೋಟಿ), ವರುಣ್ ಚಕ್ರವರ್ತಿ (8 ಕೋಟಿ), ಸುನಿಲ್ ನಾರಾಯಣ್ (6 ಕೋಟಿ) ಅವರನ್ನು ಕೆಕೆಆರ್ ಫ್ರಾಂಚೈಸಿ ಉಳಿಸಿಕೊಂಡಿದೆ.
ದುಬೈನಲ್ಲಿ ನಡೆದ ಐಪಿಎಲ್ ಟೂರ್ನಿಯ 14ನೇ ಆವೃತ್ತಿಯಲ್ಲಿ ವೆಂಕಟೇಶ್ ಅಯ್ಯರ್ ಉತ್ತಮ ಫಾರ್ಮ್‌ನಲ್ಲಿದ್ದರು. ಅಯ್ಯರ್ ಆಡಿದ 10 ಪಂದ್ಯಗಳಲ್ಲಿ 41.11ರ ಸರಾಸರಿಯಲ್ಲಿ 370 ರನ್ ಗಳಿಸಿದ್ದರು.
ಇದನ್ನೂ ಓದಿ... ಕೊಹ್ಲಿ ಏಕದಿನ ತಂಡದ ನಾಯಕತ್ವಕ್ಕೆ ಕುತ್ತು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.