ADVERTISEMENT

IPL 2022: ವಿರಾಟ್ ಕೊಹ್ಲಿ ಬೆಂಬಲವನ್ನು ಸ್ಮರಿಸಿದ ಸಿರಾಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2022, 7:33 IST
Last Updated 18 ಮಾರ್ಚ್ 2022, 7:33 IST
ಮೊಹಮ್ಮದ್ ಸಿರಾಜ್ ಹಾಗೂ ವಿರಾಟ್ ಕೊಹ್ಲಿ
ಮೊಹಮ್ಮದ್ ಸಿರಾಜ್ ಹಾಗೂ ವಿರಾಟ್ ಕೊಹ್ಲಿ   

ಮುಂಬೈ: ತಮ್ಮ ಕ್ರಿಕೆಟ್ ವೃತ್ತಿ ಜೀವನದ ಅತ್ಯಂತ ಕಠಿಣ ಸಮಯದ ಕುರಿತು ವಿವರಿಸಿರುವ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಮಾಜಿ ನಾಯಕ ವಿರಾಟ್ ಕೊಹ್ಲಿ ತಮಗೆ ನೀಡಿರುವ ಬೆಂಬಲವನ್ನು ಸ್ಮರಿಸಿದ್ದಾರೆ.

ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

'2018 ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷವಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊರತಾಗಿ ಬೇರೆ ಯಾವುದೇ ಫ್ರಾಂಚೈಸ್ ಆಗಿರುತ್ತಿದ್ದರೆ ನನ್ನನ್ನು ಕೈಬಿಡುತ್ತಿದ್ದರು. ಆದರೆ ಅಂದಿನ ನಾಯಕ ವಿರಾಟ್ ಕೊಹ್ಲಿ ನನ್ನ ಮೇಲೆ ಅತೀವ ನಂಬಿಕೆಯನ್ನು ಇರಿಸಿದ್ದರಲ್ಲದೆ ತಂಡದಲ್ಲೇ ಉಳಿಸಿಕೊಳ್ಳಲು ನೆರವಾಗಿದ್ದರು' ಎಂದು ಸಿರಾಜ್ ಹೇಳಿದ್ದಾರೆ.

'ಇಂದು ನಾನು ಏನಾಗಿದ್ದೇನೆಯೋ ಅದರ ಎಲ್ಲ ಶ್ರೇಯ ವಿರಾಟ್‌ಗೆ ಸಲ್ಲಬೇಕು. ನನ್ನ ಬೌಲಿಂಗ್ ಮೇಲಿನ ಆತ್ಮವಿಶ್ವಾಸ, ಎಲ್ಲವೂ ವಿರಾಟ್ ಇಲ್ಲದಿರುತ್ತಿದ್ದರೆ ಸಾಧ್ಯವಾಗುತ್ತಿರಲಿಲ್ಲ' ಎಂದು ತಿಳಿಸಿದ್ದಾರೆ.

'ಬೌಲರ್‌ಗಳ ಪಾಲಿಗೆ ವಿರಾಟ್ ಕೊಹ್ಲಿಯಂತಹ ನಾಯಕ ಇರುವುದು ಮುಖ್ಯವೆನಿಸುತ್ತದೆ. ಮೈದಾನದಲ್ಲಿ ಬೌಲಿಂಗ್ ಮಾಡುವಾಗ ಕಳೆಗುಂದಿದರೂ ಒಮ್ಮೆ ವಿರಾಟ್‌ನತ್ತ ದೃಷ್ಟಿ ಹಾಯಿಸಿದರೆ ಹೊಸ ಚೈತನ್ಯ ತುಂಬುತ್ತಾರೆ. ಅವರು ತುಂಬಾ ವಿಭಿನ್ನ ಹಾಗೂ ವಿಶಿಷ್ಟ ಆಟಗಾರ' ಎಂದು ಹೊಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.