ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 150 ವಿಕೆಟ್ ಸಾಧನೆ ಮಾಡಿದ್ದಾರೆ.
ಐಪಿಎಲ್ 2022ನೇ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅಶ್ವಿನ್, ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಸ್ಮರಣೀಯ ಸಾಧನೆ ಮಾಡಿದರು.
ಈ ಮೂಲಕ ಐಪಿಎಲ್ನಲ್ಲಿ 150 ವಿಕೆಟ್ ಗಳಿಸಿದ ಭಾರತದ ಆರನೇ ಹಾಗೂ ಒಟ್ಟಾರೆಯಾಗಿ ಎಂಟನೇ ಬೌಲರ್ ಎನಿಸಿದರು.
ಹಾಗೆಯೇ ಹರಭಜನ್ ಸಿಂಗ್ ಬಳಿಕ ಈ ಸಾಧನೆ ಮಾಡಿದ ಎರಡನೇ ಆಫ್ ಸ್ಪಿನ್ನರ್ ಎನಿಸಿದ್ದಾರೆ.
ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಸಾಧಕರು:
ಡ್ವೇನ್ ಬ್ರಾವೊ: 181
ಲಸಿತ್ ಮಾಲಿಂಗ: 170
ಅಮಿತ್ ಮಿಶ್ರಾ: 166
ಯಜುವೇಂದ್ರ ಚಾಹಲ್: 157
ಪಿಯೂಷ್ ಚಾವ್ಲಾ: 157
ಆರ್. ಅಶ್ವಿನ್: 152
ಭುವನೇಶ್ವರ್ ಕುಮಾರ್: 151
ಹರಭಜನ್ ಸಿಂಗ್: 150
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.