ADVERTISEMENT

ಲಖನೌಗೆ ಕೆಜಿಎಫ್ ಡೈಲಾಗ್‌ನಲ್ಲಿ ತಕ್ಕ ಉತ್ತರ ನೀಡಿದ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2022, 15:25 IST
Last Updated 20 ಏಪ್ರಿಲ್ 2022, 15:25 IST
   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವೆ ನಡೆದ ಪಂದ್ಯವು ಮೈದಾನದ ಒಳಗಡೆ ಮಾತ್ರವಲ್ಲದೆ ಹೊರಗಡೆಯೂ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಕೆಣಕಲು ಬಂದ ಲಖನೌ ತಂಡಕ್ಕೆ ಆರ್‌ಸಿಬಿ, ಕೆಜಿಎಫ್ ಡೈಲಾಗ್ ಮೂಲಕ ತಕ್ಕ ಉತ್ತರವನ್ನೇ ನೀಡಿದೆ.

ಲಖನೌ ಸೂಪರ್‌ ಜೈಂಟ್ಸ್ ಅಧಿಕೃತ ಟ್ವಿಟರ್ ಖಾತೆ ಮೂಲಕ ಪಂದ್ಯಕ್ಕೂ ಮುನ್ನ 'ಮಗಾ ಆರ್‌ಸಿಬಿ, ನಿಮ್ಮಿಂದ ಸಾಧ್ಯವಿಲ್ಲ' ಎಂದು ಕಾಲೆಳೆಯಲಾಗಿತ್ತು.

ಇದಕ್ಕೆ ಅಭಿಮಾನಿಗಳು ಸೇರಿದಂತೆ ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಆಕ್ರೋಶ ಎದುರಾಗಿತ್ತು. ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸಹ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಟ್ವೀಟ್ ವಿರುದ್ಧ ಧ್ವನಿ ಎತ್ತಿದ್ದರು.

ಕೊನೆಗೆ ಲಖನೌ ವಿರುದ್ಧ ಆರ್‌ಸಿಬಿ 18 ರನ್ ಅಂತರದ ಗೆಲುವು ದಾಖಲಿಸಿತ್ತು. ಬಳಿಕ ಲಖನೌಗೆ ಕೆಜಿಎಫ್‌ ಡೈಲಾಗ್ ಮೂಲಕ ತಕ್ಕ ಉತ್ತರವನ್ನೇ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.