ನೂರ್ ಅಹಮದ್
ಚೆನ್ನೈ: ರಚಿನ್ ರವೀಂದ್ರ ಅಜೇಯ ಅರ್ಧಶತಕ ಮತ್ತು ಋತುರಾಜ್ ಗಾಯಕವಾಡ ಅವರ ಮಿಂಚಿನ ಬ್ಯಾಟಿಂಗ್ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಭಾರಂಭ ಮಾಡಿತು.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 155 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 4 ವಿಕೆಟ್‌ಗಳಿಂದ ಜಯಿಸಿತು. ಆದರೆ ಮುಂಬೈ ತಂಡದಲ್ಲಿ ಪದಾರ್ಪಣೆ ಮಾಡಿದ ಎಡಗೈ ಸ್ಪಿನ್ನರ್ ವಿಘ್ನೇಷ್ ಪುತ್ತೂರ್ (32ಕ್ಕೆ3) ಅವರ ದಾಳಿಯಿಂದಾಗಿ ಚೆನ್ನೈ ತಂಡಕ್ಕೆ ಸುಲಭ ಜಯ ಒಲಿಯಲಿಲ್ಲ.
ರಚಿನ್ ಮತ್ತು ನಾಯಕ ಋತುರಾಜ್ 2ನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದರು. ಎಂಟನೇ ಓವರ್‌ನಲ್ಲಿ ಋತುರಾಜ್ (53; 26ಎ, 4X6, 6X3) ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದ ವಿಘ್ನೇಷ್ ಜೊತೆಯಾಟ ಮುರಿದರು. ತಮ್ಮ ಇನ್ನೆರಡು ಓವರ್‌ಗಳಲ್ಲಿ ಶಿವಂ ದುಬೆ ಮತ್ತು ದೀಪಕ್ ಹೂಡಾ ಅವರ ವಿಕೆಟ್‌ಗಳನ್ನೂ ವಿಘ್ನೇಷ್ ಗಳಿಸಿದರು. ಆದರೆ ಆರಂಭಿಕ ಬ್ಯಾಟರ್ ರಚಿನ್ (ಔಟಾಗದೇ 65; 45ಎ, 4X2, 6X4) ಮತ್ತು ರವೀಂದ್ರ ಜಡೇಜ (17; 18ಎ, 4X1) ಎಚ್ಚರಿಕೆಯಿಂದ ಆಡಿದರು. ವಿಘ್ನೇಷ್ ಹಾಕಿದ 18ನೇ ಓವರ್‌ನಲ್ಲಿ ರಚಿನ್ ಮುನ್ನುಗ್ಗಿ ಎರಡು ಸಿಕ್ಸರ್ ಬಾರಿಸಿದರು.
ಅದರೊಂದಿಗೆ ತಮ್ಮ ತಂಡದ ಗೆಲುವಿನ ಹಾದಿ ಸುಲಭಗೊಳಿಸಿದರು. ಜಯಕ್ಕೆ 4 ರನ್‌ಗಳ ಅಗತ್ಯವಿದ್ದಾಗ ಜಡೇಜ ರನ್‌ಔಟ್ ಆದರು. ಆಗ ಮಹೇಂದ್ರಸಿಂಗ್ ಧೋನಿ ಕ್ರೀಸ್‌ಗೆ ಬಂದರು. ಅವರು ಎರಡು ಎಸೆತಗಳನ್ನು ಎದುರಿಸಿದರು. ಆದರೆ ರನ್ ಗಳಿಸಲಿಲ್ಲ.
ಮುಂಬೈ ಸಾಧಾರಣ ಮೊತ್ತ...
ಚೆನ್ನೈ: ಭಾರತದ ಎಡಗೈ ವೇಗಿ ಖಲೀಲ್ ಅಹಮದ್ ಮತ್ತು ಅಫ್ಗಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ ಅವರಿಬ್ಬರ ಬೌಲಿಂಗ್ ಮುಂದೆ ಮುಂಬೈ ಇಂಡಿಯನ್ಸ್ ತಂಡವು ಸಾಧಾರಣ ಮೊತ್ತ ಗಳಿಸಿತು.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 155 ರನ್ ಗಳಿಸಿತು.
ಖಲೀಲ್ (29ಕ್ಕೆ3) ಹಾಕಿದ ಮೊದಲ ಓವರ್‌ನಲ್ಲಿಯೇ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಅವರು ಶಿವಂ ದುಬೆಗೆ ಕ್ಯಾಚಿತ್ತರು. ಖಾತೆ ತೆರೆಯದೇ ಮರಳಿದರು. ಖಲೀಲ್ ತಮ್ಮ ಇನ್ನೊಂದು ಓವರ್‌ನಲ್ಲಿ ಹಾಕಿದ ಇನ್‌ಸ್ವಿಂಗರ್‌ಗೆ ರಿಯಾನ್ ರಿಕೆಲ್ಟನ್ (13; 7ಎ, 4X3) ಕ್ಲೀನ್‌ಬೌಲ್ಡ್ ಆದರು. ಆಫ್‌ಸ್ಪಿನ್ನರ್ ಅಶ್ವಿನ್ ತವರಿನಂಗಳದಲ್ಲಿ ಕಣಕ್ಕಿಳಿದರು. ವಿಲ್ ಜ್ಯಾಕ್ಸ್ (11; 7ಎ) ವಿಕೆಟ್ ಗಳಿಸಿದರು.
ಈ ಹಂತದಲ್ಲಿ ಜೊತೆಗೂಡಿದ ‘ಹಂಗಾಮಿ ನಾಯಕ’ ಸೂರ್ಯಕುಮಾರ್ ಯಾದವ್ (29; 26ಎ) ಮತ್ತು ತಿಲಕ್ ವರ್ಮಾ (31; 25ಎ) ಅವರು ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು.
ಆದರೆ ನೂರ್ ಅಹಮದ್ (18ಕ್ಕೆ4) ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ. ಇದರಿಂದಾಗಿ ತಂಡವು ಕುಸಿಯುವ ಆತಂಕವಿತ್ತು. ಕೊನೆ ಹಂತದ ಓವರ್‌ಗಳಲ್ಲಿ ದೀಪಕ್ ಚಾಹರ್ 2 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಅಜೇಯ 28 ರನ್ ಹೊಡೆದು ತಂಡದ ಮೊತ್ತ ಹೆಚ್ಚಿಸಿದರು.
ಸಂಕ್ಷಿಪ್ತ ಸ್ಕೋರು:
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 9ಕ್ಕೆ155 (ಸೂರ್ಯಕುಮಾರ್ ಯಾದವ್ 29, ತಿಲಕ್ ವರ್ಮಾ 31, ದೀಪಕ್ ಚಾಹರ್ ಔಟಾಗದೇ 28, ಖಲೀಲ್ ಅಹಮದ್ 29ಕ್ಕೆ3, ನೂರ್ ಅಹಮದ್ 18ಕ್ಕೆ4).
ಚೆನ್ನೈ ಸೂಪರ್ ಕಿಂಗ್ಸ್: 19.1 ಓವರ್‌ಗಳಲ್ಲಿ 6ಕ್ಕೆ158 (ರಚಿನ್ ರವೀಂದ್ರ ಅಜೇಯ 65, ಋತುರಾಜ್ ಗಾಯಕವಾಡ 53, ರವೀಂದ್ರ ಜಡೇಜ 17, ವಿಘ್ನೇಷ್ ಪುತ್ತೂರ್ 32ಕ್ಕೆ3) ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 4 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ನೂರ್ ಅಹಮದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.