ADVERTISEMENT

IPL 2025: DC vs GT; KL ರಾಹುಲ್ ಆಕರ್ಷಕ ಶತಕ– ಸವಾಲಿನ ಮೊತ್ತ ಒಡ್ಡಿದ ಡೆಲ್ಲಿ

IPL 2025: DC vs GT

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2025, 16:10 IST
Last Updated 18 ಮೇ 2025, 16:10 IST
<div class="paragraphs"><p>KL ರಾಹುಲ್</p></div>

KL ರಾಹುಲ್

   

REUTERS/Anushree Fadnavis

ಬೆಂಗಳೂರು: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಇಂದಿನ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರ ಆಕರ್ಷಕ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್ ಕಲೆ ಹಾಕಿತು.

ADVERTISEMENT

ಆರಂಭದಿಂದಲೂ ಬಿಡುಬೀಸಿನ ಆಟಕ್ಕೆ ಇಳಿದ ಕೆ.ಎಲ್. ರಾಹುಲ್ 65 ಚೆಂಡುಗಳಲ್ಲಿ 112 ರನ್ ಚಚ್ಚಿ ಮಿಂಚಿದರು.

ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಿರೀಕ್ಷೆ ತಲೆಕೆಳಗಾಗುವಂತೆ ಮಾಡಿದ್ದು ಕೆ.ಎಲ್ ರಾಹುಲ್. ಕೊನೆವರೆಗೂ ಅವರನ್ನು ಔಟ್ ಮಾಡಲು ಗುಜರಾತ್ ತಂಡದ ಶ್ರಮ ಸಾಧ್ಯವಾಗಲಿಲ್ಲ. ಡುಪ್ಲೆಸಿಸ್ ಬೇಗ ನಿರ್ಗಮಿಸಿದರು.

ಅಭಿಷೇಕ್ ಪೋರ್ 30, ಅಕ್ಷರ್ ಪಟೇಲ್ 25 ರನ್ ಬಾರಿಸಿ ನಿರ್ಗಮಿಸಿದರು. ಸ್ಟಬ್ಸ್ 25 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಗುಜರಾತ್ ಟೈಟನ್ಸ್ ತಂಡದ ಬೌಲರ್‌ಗಳು ಮಂಕಾಗಿದ್ದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.