
ಜೇಕ್ ಫ್ರೇಸರ್ ಮೆಕ್‌ಗುರ್ಕ್
ಪಿಟಿಐ ಚಿತ್ರ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಉಳಿದ ಅವಧಿಗೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರು ಅಲಭ್ಯರಾಗಿದ್ದಾರೆ. ಅವರ ಬದಲು ಬಾಂಗ್ಲಾದೇಶದ ಮುಸ್ತಫಿಜುರ್ ರಹಮಾನ್ ಅವರನ್ನ ಸೇರಿಸಿಕೊಳ್ಳಲಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ತಳಿಸಿದೆ.
ಭಾರತ–ಪಾಕಿಸ್ತಾನ ನಡುವಣ ಸಂಘರ್ಷ ಉಲ್ಬಣಿಸಿದ ಕಾರಣ, ಐಪಿಎಲ್ ಟೂರ್ನಿಯನ್ನು ಮೇ 9ರಂದು ಒಂದು ವಾರದ ಅವಧಿಗೆ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ, ವಿದೇಶಿ ಆಟಗಾರರು ಭಾರತ ತೊರೆದಿದ್ದರು.
ಇದೀಗ, ಭಾರತ–ಪಾಕ್ ಕದನ ವಿರಾಮ ಘೋಷಿಸಿರುವುದರಿಂದ ಐಪಿಎಲ್ ಅನ್ನು ಪುನರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಮೇ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್ (ಕೆಕೆಆರ್) ನಡುವಣ ಸೆಣಸಾಟದೊಂದಿಗೆ ಮತ್ತೆ ಆರಂಭವಾಗಲಿದೆ.
ಲೀಗ್, ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್ ಸೇರಿದಂತೆ ಇನ್ನು 17 ಪಂದ್ಯಗಳ ಬಾಕಿ ಇವೆ.
ಸ್ಫೋಟಕ ಶೈಲಿಯ ಬ್ಯಾಟರ್ ಆಗಿರುವ ಮೆಕ್‌ಗುರ್ಕ್ ಐಪಿಎಲ್‌ನಲ್ಲಿ 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, ನಾಲ್ಕು ಅರ್ಧಶತಕ ಸಹಿತ 385 ರನ್ ಗಳಿಸಿದ್ದಾರೆ. 199.49 ಅವರ ಸ್ಟ್ರೈಕ್‌ರೇಟ್ ಆಗಿದೆ. ಆದರೆ, ಈ ಬಾರಿ ಅವರ ಬ್ಯಾಟ್ ಹೆಚ್ಚು ಸದ್ದು ಮಾಡಿಲ್ಲ. ಆಡಿದ 6 ಪಂದ್ಯಗಳಲ್ಲಿ ಕೇವಲ 55 ರನ್ ಗಳಿಸಿದ್ದಾರೆ ಅಷ್ಟೇ.
ರಹಮಾನ್ ಐಪಿಎಲ್‌ನಲ್ಲಿ 57 ಪಂದ್ಯಗಳಲ್ಲಿ ಆಡಿದ್ದು, 61 ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.