ADVERTISEMENT

ಜಿಯೊಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ವೀಕ್ಷಣೆ ಉಚಿತ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 14:12 IST
Last Updated 18 ಮಾರ್ಚ್ 2025, 14:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಜಿಯೊ ಕಂಪನಿಯು ತನ್ನ ಗ್ರಾಹಕರಿಗೆ ಕ್ರಿಕೆಟ್‌ ವೀಕ್ಷಣೆಗೆ ಅನುಕೂಲ ಕಲ್ಪಿಸಲು ವಿಶೇಷ ಕೊಡುಗೆ ಪ್ರಕಟಿಸಿದೆ.

ಜಿಯೊ ಗ್ರಾಹಕರು ₹299 ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೊ ಸಿಮ್ ಸಂಪರ್ಕ ಪಡೆದರೆ ಅಥವಾ ಕನಿಷ್ಠ ₹299ಗಳೊಂದಿಗೆ ರೀಚಾರ್ಜ್ ಮಾಡಿದರೆ ಜಿಯೊ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಕ್ರಿಕೆಟ್‌ ಅನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಕೊಡುಗೆಯು ಮಾರ್ಚ್ 31ರ ವರೆಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಈ ಅನಿಯಮಿತ ಕ್ರಿಕೆಟ್ ಕೊಡುಗೆ ಮೂಲಕ ಗ್ರಾಹಕರು ಟಿ.ವಿ, ಮೊಬೈಲ್‌ನಲ್ಲಿ 90 ದಿನಗಳ ಉಚಿತ ಜಿಯೊ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು 4ಕೆ ಗುಣಮಟ್ಟದಲ್ಲಿ ಪಡೆಯಬಹುದಾಗಿದೆ. ಮಾರ್ಚ್ 22ರಿಂದ ಪ್ರಾರಂಭವಾಗುವ ಐಪಿಎಲ್ ಕ್ರಿಕೆಟ್‌ ಅನ್ನು ಗ್ರಾಹಕರು ಉಚಿತವಾಗಿ ನೋಡಬಹುದಾಗಿದೆ. ಜಿಯೊಹಾಟ್‌ಸ್ಟಾರ್ ಪ್ಯಾಕ್ ಮಾರ್ಚ್ 22ರಿಂದ 90 ದಿನದವರೆಗೆ ಮಾನ್ಯವಾಗಿರುತ್ತದೆ ಎಂದು ವಿವರಿಸಿದೆ.

ADVERTISEMENT

ಈ ಕೊಡುಗೆಯೊಂದಿಗೆ ಜಿಯೊ ಮನೆಗಳಿಗೆ ಜಿಯೊ ಫೈಬರ್ ಅಥವಾ ಜಿಯೊ ಏರ್‌ಫೈಬರ್‌ನ ಉಚಿತ ಪ್ರಾಯೋಗಿಕ ಸಂಪರ್ಕವನ್ನು ಸಹ ಜಿಯೊ ಒದಗಿಸುತ್ತದೆ. ಅಲ್ಟ್ರಾ-ಫಾಸ್ಟ್ ಇಂಟರ್‌ನೆಟ್‌ನ ಉಚಿತ ಪ್ರಾಯೋಗಿಕ ಸಂಪರ್ಕವು 50 ದಿನದವರೆಗೆ ಉಚಿತವಾಗಿರುತ್ತದೆ. ಗ್ರಾಹಕರು 4ಕೆ ನಲ್ಲಿ ಕ್ರಿಕೆಟ್ ನೋಡುವ ಜೊತೆಗೆ ಮನರಂಜನೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಜಿಯೊ ಫೈಬರ್ ಅಥವಾ ಜಿಯೊ ಏರ್‌ಫೈಬರ್‌ನ ಉಚಿತ ಪ್ರಾಯೋಗಿಕ ಸಂಪರ್ಕದೊಂದಿಗೆ 800ಕ್ಕೂ ಅಧಿಕ ಟಿ.ವಿ ಚಾನೆಲ್‌ಗಳು, 11ಕ್ಕೂ ಹೆಚ್ಚು ಒಟಿಟಿ ಅಪ್ಲಿಕೇಷನ್‌ಗಳು, ಅನಿಯಮಿತ ವೈ–ಫೈ ಸಹ ಲಭ್ಯವಿದೆ ಎಂದು ತಿಳಿಸಿದೆ.

ಈ ಕೊಡುಗೆಯ ‍ಪ್ರಯೋಜನ ಪಡೆಯಲು ಪ್ರಸ್ತುತ ಜಿಯೊ ಸಿಮ್ ಬಳಕೆದಾರರು ಕನಿಷ್ಠ ₹299ಗಳೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಹೊಸ ಜಿಯೊ ಗ್ರಾಹಕರು ₹299 ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೊ ಸಿಮ್ ಪಡೆಯಬೇಕಾಗುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.