ಚಿತ್ರಕೃಪೆ: X/cricbuzz
ಅಹಮದಾಬಾದ್: ನಾಯಕ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಶುಕ್ರವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ಎದುರು 38 ರನ್‌ಗಳಿಂದ ಗೆದ್ದ ಟೈಟನ್ಸ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಪ್ಯಾಟ್ ಕಮಿನ್ಸ್ ನಾಯಕತ್ವದ ಹೈದರಾಬಾದ್ ತಂಡದ ಪ್ಲೇ ಆಫ್ ಪ್ರವೇಶದ ಹಾದಿ ಬಹುತೇಕ ಕೊನೆಗೊಂಡಿತು. ಹೈದರಾಬಾದ್ ತಂಡವು ಹೋದ ವರ್ಷದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟಾಸ್ ಗೆದ್ದ ಹೈದರಾಬಾದ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಾಯಿ ಸುದರ್ಶನ್ (48; 23ಎ, 4X9) ಮತ್ತು ಗಿಲ್ (76; 38ಎ, 4X10, 6X2) ಅವರು ಮೊದಲ ವಿಕೆಟ್ ಜೊತೆ ಯಾಟದಲ್ಲಿ 87 ರನ್ ಸೇರಿಸಿದರು. ಜೋಸ್ ಬಟ್ಲರ್ (64; 37ಎ, 4X3, 6X4) ಅವರೂ ಚೆಂದದ ಅರ್ಧಶತಕ ಗಳಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 224 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ವೇಗಿ ಮೊಹಮ್ಮದ್ ಸಿರಾಜ್ (33ಕ್ಕೆ2) ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ (19ಕ್ಕೆ2) ಮಿಂಚಿದರು.
ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ತಂಡಕ್ಕೆ ಟ್ರಾವಿಸ್ ಹೆಡ್ (20; 16ಎ, 4X4) ಮತ್ತು ಅಭಿಷೇಕ್ ಶರ್ಮಾ (74; 41ಎ, 4X4, 6X6) ಮೊದಲ ವಿಕೆಟ್ ಜೊತೆಯಾಟದಲ್ಲಿ 49 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ಬೌಲಿಂಗ್ ಪಡೆ ನೋಡಿಕೊಂಡಿತು.
ಗಿಲ್, ಸಾಯಿ ಜೊತೆ ಯಾಟ:
ಗುಜರಾತ್ ತಂಡದ ಆರಂಭಿಕ ಜೋಡಿ ಪವರ್‌ಪ್ಲೇ ಅವಧಿಯಲ್ಲಿಯೇ 81 ರನ್‌ಗಳನ್ನು ಸೂರೆ ಮಾಡಿತು. ಸುದರ್ಶನ್ ಅವರು ಕೇವಲ 2 ರನ್‌ಗಳ ಅಂತರದಿಂದ ಅರ್ಧಶತಕ ಕೈತಪ್ಪಿಸಿಕೊಂಡರು. ಆದರೆ ಟೂರ್ನಿಯಲ್ಲಿ 500ಕ್ಕಿಂತ ಹೆಚ್ಚು ರನ್ ಗಳಿಸಿದಸಾಧನೆಯನ್ನು ತಮ್ಮದಾಗಿಸಿಕೊಂಡರು. ಏಳನೇ ಓವರ್‌ನಲ್ಲಿ ಅವರು ಜೀಶನ್ ಅನ್ಸಾರಿ ಎಸೆತದಲ್ಲಿ ಕ್ಲಾಸನ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಜೊತೆಯಾಟ ಮುರಿಯಿತು.
ಕ್ರೀಸ್‌ಗೆ ಬಂದ ಬಟ್ಲರ್ ಅವರು ಗಿಲ್ ಜೊತೆಗೂಡಿ ರನ್ ಗಳಿಕೆಯ ವೇಗವನ್ನು ನಿರ್ವಹಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ಶತಕದತ್ತ ಹೆಜ್ಜೆಹಾಕಿದ್ದ ಗಿಲ್ ಅವರು ರನ್‌ಔಟ್ ಆದಾಗ ಜೊತೆಯಾಟ ಮುರಿಯಿತು. ಬಟ್ಲರ್ ಜೊತೆಗೂಡಿದ ವಾಷಿಂಗ್ಟನ್ ಸುಂದರ್ ಕೂಡ ಬೀಸಾ ಟವಾಡಿದರು. ಅವರಿಬ್ಬರೂ ಸೇರಿ 57 ರನ್ ಸೇರಿಸಿದರು. ಇದರಿಂದಾಗಿ ತಂಡವು ದ್ವಿಶತಕದ ಗಡಿ ದಾಟಿತು.
ಸಂಕ್ಷಿಪ್ತಸ್ಕೋರು:
ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 6ಕ್ಕೆ224 (ಸಾಯಿ ಸುದರ್ಶನ್ 48, ಶುಭಮನ್ ಗಿಲ್ 76, ಜೋಸ್ ಬಟ್ಲರ್ 64, ವಾಷಿಂಗ್ಟನ್ ಸುಂದರ್ 21, ಜಯದೇವ್ ಉನದ್ಕತ್ 35ಕ್ಕೆ3) ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 6ಕ್ಕೆ186 (ಟ್ರಾವಿಸ್ ಹೆಡ್ 20, ಅಭಿಷೇಕ್ ಶರ್ಮಾ 74, ಹೆನ್ರಿಚ್ ಕ್ಲಾಸನ್ 23, ನಿತೀಶ್ ಕುಮಾರ್ ರೆಡ್ಡಿ ಔಟಾಗದೇ 21, ಮೊಹಮ್ಮದ್ ಸಿರಾಜ್ 33ಕ್ಕೆ2, ಪ್ರಸಿದ್ಧ ಕೃಷ್ಣ 19ಕ್ಕೆ2) ಫಲಿತಾಂಶ: ಗುಜರಾತ್ ಟೈಟನ್ಸ್‌ಗೆ 38 ರನ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.