ADVERTISEMENT

IPL 2025 | LSG vs PBKS: ಲಖನೌ ಎದುರು 8 ವಿಕೆಟ್‌ಗಳ ಜಯ ಸಾಧಿಸಿದ ಪಂಜಾಬ್‌

ಪಿಟಿಐ
Published 1 ಏಪ್ರಿಲ್ 2025, 15:47 IST
Last Updated 1 ಏಪ್ರಿಲ್ 2025, 15:47 IST
<div class="paragraphs"><p>ಉತ್ತರ ಪ್ರದೇಶದ ಲಖನೌನಲ್ಲಿರುವ ಏಕನಾ ಕ್ರಿಕೆಟ್‌ ಮೈದಾನದಲ್ಲಿ ಮಂಗಳವಾರ ನಡೆದ&nbsp; ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್‌ನ&nbsp; ಆಯುಷ್ ಬದೋನಿ ಆಟದ ವೈಖರಿ</p></div>

ಉತ್ತರ ಪ್ರದೇಶದ ಲಖನೌನಲ್ಲಿರುವ ಏಕನಾ ಕ್ರಿಕೆಟ್‌ ಮೈದಾನದಲ್ಲಿ ಮಂಗಳವಾರ ನಡೆದ  ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್‌ನ  ಆಯುಷ್ ಬದೋನಿ ಆಟದ ವೈಖರಿ

   

ರಾಯಿಟರ್ಸ್ ಚಿತ್ರ

ಲಖನೌ: ಆರಂಭ ಆಟಗಾರ ಪ್ರಭಸಿಮ್ರನ್ ಸಿಂಗ್ (69, 34ಎ, 4x9, 6x3) ಮತ್ತು ನಾಯಕ ಶ್ರೇಯಸ್‌ ಅಯ್ಯರ್ (ಔಟಾಗದೇ 52, 30 ಎಸೆತ, 4x3, 6x4) ಅವರ ಅರ್ಧ ಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್‌ ಪಂದ್ಯದಲ್ಲಿ ಮಂಗಳವಾರ ಲಖನೌ ಸೂಪರ್ ಕಿಂಗ್ಸ್ ತಂಡದ ಮೇಲೆ ಎಂಟು ವಿಕೆಟ್‌ಗಳ ಅಧಿಕಾರಯುತ ಗೆಲುವು ಪಡೆಯಿತು.

ADVERTISEMENT

ಏಕನಾ ಕ್ರೀಡಾಂಗಣದಲ್ಲಿ ಬ್ಯಾಟ್‌ ಮಾಡಲು ಇಳಿಸಲ್ಪಟ್ಟ ಲಖನೌ ಸೂಪರ್‌ ಕಿಂಗ್ಸ್‌ ತಂಡವನ್ನು ಪಂಜಾಬ್‌ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್‌ನಿಂದ 7 ವಿಕೆಟ್‌ಗೆ 171 ರನ್‌ಗಳಿಗೆ ಕಟ್ಟಿಹಾಕಿದರು. ನಂತರ ಬ್ಯಾಟರ್‌ಗಳು ಬಿರುಸಿನ ಆಟವಾಡಿ ಇನ್ನೂ 22 ಎಸೆತಗಳು ಇರುವಂತೆ 2 ವಿಕೆಟ್‌ಗೆ 177 ರನ್ ಹೊಡೆದು ಸತತ ಎರಡನೇ ಜಯ ಪಡೆಯಿತು.

ಪ್ರಿಯಾನ್ಶ್‌ ಆರ್ಯ (8) ಅವರು ಬೇಗ ನಿರ್ಗಮಿಸಿದರೂ ಇನ್ನೊಂದು ಕಡೆ ಅಬ್ಬರಿಸುತ್ತಿದ್ದ ಪ್ರಭಸಿಮ್ರನ್ ಅವರು ನಾಯಕ ಅಯ್ಯರ್ ಅವರೊಡನೆ 43 ಎಸೆತಗಳಲ್ಲಿ 84 ರನ್ ಬಾರಿಸಿ ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸಿದರು. ನೇಹಲ್ ವಧೇರಾ (43, 25ಎ, 4x3, 6x4) ಅವರೂ ಮಿಂಚಿನ ಆಟವಾಡಿದ್ದರಿಂದ ತಂಡ ಬೇಗನೇ ಗುರಿತಲುಪಿತು.

ಇದಕ್ಕೆ ಮೊದಲು, ಪಂಜಾಬ್ ಕಿಂಗ್ಸ್ ತಂಡದ ಬೌಲರ್‌ಗಳು ಆರಂಭದಿಂದಲೇ ಪರಿಣಾಮಕಾರಿ ದಾಳಿ ಸಂಘಟಿಸಿ  ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಉತ್ತಮ ಲಯದಲ್ಲಿರುವ ನಿಕೋಲಸ್‌ ಪೂರನ್ (44, 30 ಎಸೆತ, 4x5, 6x2) ಮತ್ತು ಆಯುಷ್‌ ಬಡೋನಿ (41, 33 ಎಸೆತ, 4x1, 6x3) ಸ್ವಲ್ಪ ಪ್ರತಿರೋಧ ತೋರಿದರೂ ಅಂತಿಮವಾಗಿ ಮೊತ್ತ ನಿರೀಕ್ಷೆಗಿಂತ ಕಡಿಮೆಯಾಯಿತು.

ಐಪಿಎಲ್‌ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದಿದ್ದ ಲಖನೌ ತಂಡದ ನಾಯಕ ರಿಷಭ್ ಪಂತ್ (2) ಅವರು ಸತತ ಮೂರನೇ ಬಾರಿ ವಿಫಲರಾದರು.

ಪೂರನ್ ಮತ್ತು ಬಡೋನಿ ಅವರು ಆಕ್ರಮಣಕಾರಿಯಾಗಿದ್ದು ನಾಲ್ಕನೇ ವಿಕೆಟ್‌ಗೆ 54 ರನ್ ಸೇರಿಸಿ ಚೇತರಿಕೆ ಒದಗಿಸಿದರು. ಕೊನೆಯಲ್ಲಿ ಮಿಲ್ಲರ್ (19, 18ಎ) ಮತ್ತು ಅಬ್ದುಲ್ ಸಮದ್ (27, 12ಎ, 4X2, 6X2) ಅವರ ಆಟದಿಂದ 170 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

ಸ್ಕೋರುಗಳು: 20 ಓವರುಗಳಲ್ಲಿ 7 ವಿಕೆಟ್‌ಗೆ 171 (ಏಡನ್ ಮರ್ಕರಂ 28, ಪೂರನ್‌ 44, ಬಡೋನಿ 41, ಅಬ್ದುಲ್‌ ಸಮದ್ 27; ಅರ್ಷದೀಪ್ 43ಕ್ಕೆ3); ಲಖನೌ ಸೂಪರ್‌ ಜೈಂಟ್ಸ್‌: 16.2 ಓವರುಗಳಲ್ಲಿ 2ಕ್ಕೆ 177 (ಪ್ರಭಸಿಮ್ರನ್ ಸಿಂಗ್ 69, ಶ್ರೇಯಸ್‌ ಅಯ್ಯರ್ ಔಟಾಗದೇ 52, ನೇಹಲ್ ವಧೇರಾ ಔಟಾಗದೇ 43; ದಿಗ್ವೇಶ್ ರಾಥಿ 30ಕ್ಕೆ2). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.