ಬೆಂಗಳೂರು: ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಗುರುವಾರ ರಾಜಸ್ಥಾನ ರಾಯಲ್ಸ್ ಆಟಗಾರರ ಅಭ್ಯಾಸ ನೋಡಲು ಬಂದಾಗ ಅಲ್ಲಿದ್ದವರೆಲ್ಲರಿಗೂ ಅಚ್ಚರಿ.
ಏಕೆಂದರೆ; ಮೂರು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಾಸೂರ್ ಮೆಮೊರಿಯಲ್ ಶೀಲ್ಡ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವಿಜಯಾ ಕ್ರಿಕೆಟ್ ಕ್ಲಬ್ (ಮಾಲೂರು) ತಂಡದ ಪರವಾಗಿ ಆಡುವ ಸಂದರ್ಭದಲ್ಲಿ ದ್ರಾವಿಡ್ ಕಾಲಿಗೆ ಪೆಟ್ಟಾಗಿತ್ತು.
ಮೂಳೆಮುರಿತ ಇದ್ದ ಕಾರಣ ದಪ್ಪ ಬ್ಯಾಂಡೇಜ್ ಕೂಡ ಹಾಕಲಾಗಿತ್ತು. ಆದರೆ ಅವರು ಜೈಪುರಕ್ಕೆ ತೆರಳಿದರು. ಬುಧವಾರ ಮತ್ತು ಗುರುವಾರ ಆಟಗಾರರು ಅಭ್ಯಾಸ ನಡೆಸುವ ಸ್ಥಳಕ್ಕೆ ಬಂದು ಮಾರ್ಗದರ್ಶನ ಮಾಡಿದರು. ರಾಜಸ್ಥಾನ ರಾಯಲ್ಸ್ ತಂಡವು ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದೆ. ಅದರಲ್ಲಿ ದ್ರಾವಿಡ್ ಅವರು ಗಾಲ್ಫ್ ಕಾರ್ಟ್‌ನಲ್ಲಿ ಮೈದಾನಕ್ಕೆ ಬರುವ ದೃಶ್ಯವಿದೆ. ಊರುಗೋಲುಗಳ ಸಹಾಯದಿಂದ ನೆಟ್ಸ್‌ನತ್ತ ಬಂದು ಎಲ್ಲರೊಂದಿಗೆ ಮಾತನಾಡುತ್ತಾರೆ. ನಂತರ ಒಂದು ಬದಿಯಲ್ಲಿರುವ ಕುರ್ಚಿಯಲ್ಲಿ ಕುಳಿತು ಅಭ್ಯಾಸ ವೀಕ್ಷಿಸುತ್ತಾರೆ.
52 ವರ್ಷ ವಯಸ್ಸಿನ ದ್ರಾವಿಡ್ ಅವರು ಈಚೆಗೆ ಬೆಂಗಳೂರಿನಲ್ಲಿ ತಮ್ಮ ಮಗ ಅನ್ವಯ್ ಜೊತೆಗೆ ಸ್ಥಳೀಯ ಕ್ರಿಕೆಟ್‌ನಲ್ಲಿ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.