ವಿರಾಟ್ ಕೊಹ್ಲಿ ಅಭಿಮಾನಿಗಳು
(ರಾಯಿಟರ್ಸ್ ಚಿತ್ರ)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಇಂದು (ಶನಿವಾರ) ನಡೆಯಬೇಕಿದ್ದ ಐಪಿಎಲ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಿಗದಿಯಾಗಿತ್ತು. ಆದರೆ ಸತತವಾಗಿ ಸುರಿದ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಯಿತು. ಅಂತಿಮವಾಗಿ ಕೈಬಿಡಲಾಯಿತು.
ಇದರಿಂದಾಗಿ ಇತ್ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಿಕೊಳ್ಳಲಾಯಿತು. ಇದರೊಂದಿಗೆ 12 ಪಂದ್ಯಗಳಲ್ಲಿ 17 ಅಂಕ ಸಂಪಾದಿಸಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಪ್ಲೇ-ಆಫ್ ಸನಿಹದಲ್ಲಿದೆ.
ಮತ್ತೊಂದೆಡೆ 13 ಪಂದ್ಯಗಳಲ್ಲಿ 12 ಅಂಕ ಮಾತ್ರ ಗಳಿಸಿರುವ ಕೋಲ್ಕತ್ತ ನೈಟ್ ರೈಡರ್ಸ್, ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದೆ. ಸದ್ಯ ಆರನೇ ಸ್ಥಾನದಲ್ಲಿರುವ ಕೆಕೆಆರ್ ಬಳಿ ಇನ್ನೊಂದು ಪಂದ್ಯ ಮಾತ್ರ ಬಾಕಿಯಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷದಿಂದಾಗಿ ಐಪಿಎಲ್ ಒಂದು ವಾರಗಳ ಕಾಲ ರದ್ದುಗೊಂಡಿತ್ತು. ಇದೀಗ ಪುನಾರರಂಭದ ಪಂದ್ಯದಲ್ಲಿ ಒಂದು ಎಸೆತವನ್ನು ಕಾಣದೇ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಮತ್ತೊಂದೆಡೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಅವರನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಲ್ಲಿದ್ದರು. ಅವರ ಆಸೆಯೂ ಕೈಗೂಡಲಿಲ್ಲ. ಆದರೂ ವಿರಾಟ್ ಕೊಹ್ಲಿ ಅವರ ಬಿಳಿ ಸಮವಸ್ತ್ರ ಧರಿಸಿ ಗೌರವ ಸೂಚಿಸಿದರು.
ವಿರಾಟ್ ಕೊಹ್ಲಿ ಅಭಿಮಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.