ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಹಣಾಹಣಿಯಲ್ಲಿ ಗೆದ್ದವರೊಂದಿಗೆ, ಅಹಮದಾಬಾದ್‌ನಲ್ಲಿ ಜೂನ್ 3ರಂದು ನಡೆಯುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಆರ್‌ಸಿಬಿ, ಹಿಂದಿನ ಆವೃತ್ತಿಗಳಲ್ಲಿ ಇಬ್ಬರು ಅಥವಾ ಮೂವರು ಆಟಗಾರರ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿರುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ.
ಪ್ಲೇ–ಆಫ್ ಪಂದ್ಯ ಸೇರಿದಂತೆ ಆಡಿರುವ ಒಟ್ಟು 14 ಪಂದ್ಯಗಳ ಪೈಕಿ 10ರಲ್ಲಿ ಗೆದ್ದಿರುವ ಆರ್‌ಸಿಬಿ ಪರ, 9 ಬೇರೆ ಬೇರೆ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಅಂದರೆ, ತಂಡದಲ್ಲಿರುವ ಹೆಚ್ಚಿನ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದು, ಪಂದ್ಯ ಗೆದ್ದುಕೊಡಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ನಾಯಕ ರಜತ್ ಪಾಟೀದಾರ್, ಆಲ್‌ರೌಂಡರ್ ಕೃಣಾಲ್ ಪಾಂಡ್ಯ ತಲಾ ಎರಡು ಪಂದ್ಯಗಳಲ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ, ತಂಡದ ಪರ ಈ ಬಾರಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ (614 ರನ್) ಸೇರಿದಂತೆ 7 ಮಂದಿ ಒಮ್ಮೊಮ್ಮೆ 'ಮ್ಯಾನ್ ಆಫ್ ದಿ ಮ್ಯಾಚ್' ಎನಿಸಿಕೊಂಡಿದ್ದಾರೆ.
ಪಂದ್ಯಶ್ರೇಷ್ಠರ ಮಾಹಿತಿ ಇಲ್ಲಿದೆ
ಕೃಣಾಲ್ ಪಾಂಡ್ಯ: 29 ರನ್‌ಗೆ 3 ವಿಕೆಟ್ vs ಕೋಲ್ಕತ್ತ ನೈಟ್ ರೈಡರ್ಸ್
ರಜತ್ ಪಾಟೀದಾರ್: 51 ರನ್ vs ಚೆನ್ನೈ ಸೂಪರ್ ಕಿಂಗ್ಸ್
ರಜತ್ ಪಾಟೀದಾರ್: 64 ರನ್ vs ಮುಂಬೈ ಇಂಡಿಯನ್ಸ್
ಫಿಲ್ ಸಾಲ್ಟ್: 65 ರನ್ vs ರಾಜಸ್ಥಾನ ರಾಯಲ್ಸ್
ಟಿಮ್ ಡೇವಿಡ್: 50 ರನ್ vs ಪಂಜಾಬ್ ಕಿಂಗ್ಸ್ (ಮಳೆಯಿಂದಾಗಿ 14 ಓವರ್‌ಗಳಿಗೆ ಕಡಿತಗೊಂಡಿದ್ದ ಈ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿತ್ತು)
ವಿರಾಟ್ ಕೊಹ್ಲಿ: 73 ರನ್ vs ಪಂಜಾಬ್ ಕಿಂಗ್ಸ್
ಜೋಶ್ ಹ್ಯಾಜಲ್‌ವುಡ್: 33 ರನ್‌ಗೆ 4 ವಿಕೆಟ್ vs ರಾಜಸ್ಥಾನ ರಾಯಲ್ಸ್
ಕೃಣಾಲ್ ಪಾಂಡ್ಯ: 73 ರನ್ ಹಾಗೂ 28ಕ್ಕೆ 1 ವಿಕೆಟ್ vs ಡೆಲ್ಲಿ ಕ್ಯಾಪಿಟಲ್ಸ್
ರೊಮಾರಿಯೊ ಶೆಫರ್ಡ್: 53 ರನ್ vs ಚೆನ್ನೈ ಸೂಪರ್ ಕಿಂಗ್ಸ್
ಜಿತೇಶ್ ಶರ್ಮಾ: 85 ರನ್ vs ಲಖನೌ ಸೂಪರ್ ಜೈಂಟ್ಸ್
ಸುಯಶ್ ಶರ್ಮಾ: 17 ರನ್‌ಗೆ 3 ವಿಕೆಟ್ vs ಪಂಜಾಬ್ ಕಿಂಗ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.