
ಐಪಿಎಲ್ ಟ್ರೋಫಿ ಜೊತೆ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್
ಚಿತ್ರ: ಪಿಟಿಐ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಿಡುಗಡೆ ಮಾಡಿದ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ.
ಸ್ವಸ್ತಿಕ್ ಚಿಕಾರ
ಮಾಯಾಂಕ್ ಅಗರ್ವಾಲ್
ಲಿಯಾಮ್ ಲಿವಿಂಗ್‌ಸ್ಟೋನ್
ಮನೋಜ್ ಭಾಂಡಗೆ
ಲುಂಗಿ ಎನ್‌ಗಿಡಿ
ಮುಜರಬಾನಿ
ಮೋಹಿತ್ ರಾಥೀ
ರಜತ್ ಪಾಟಿದಾರ್ (ನಾಯಕ)
ವಿರಾಟ್ ಕೊಹ್ಲಿ
ದೇವದತ್ತ ಪಡಿಕ್ಕಲ್
ಫಿಲ್ ಸಾಲ್ಟ್
ಜಿತೇಶ್ ಶರ್ಮಾ
ಕೃನಾಲ್ ಪಾಂಡ್ಯ
ಸ್ವಪ್ನಿಲ್ ಸಿಂಗ್
ಟಿಮ್ ಡೇವಿಡ್
ರೊಮಾರಿಯೊ ಶೆಫರ್ಡ್
ಜಾಕೋಬ್ ಬೆಥೆಲ್
ಜೋಶ್ ಹ್ಯಾಜಲ್‌ವುಡ್
ಯಶ್ ದಯಾಳ್
ಭುವನೇಶ್ವರ ಕುಮಾರ್
ನುವಾನ್ ತುಷಾರ
ರಸಿಕ್ ಸಲಾಂ
ಅಭಿನಂದನ್ ಸಿಂಗ್
ಸುಯಾಶ್ ಶರ್ಮಾ.
ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಂಡಿರುವ ಕುರಿತು ಮಾತನಾಡಿದ ಆರ್‌ಸಿಬಿ ಮುಖ್ಯ ತರಬೇತುದಾರ ಆಂಡಿ ಫ್ಲವರ್, ನಾವು ಬಲಿಷ್ಠ ತಂಡವನ್ನು ಉಳಿಸಿಕೊಂಡಿದ್ದೇವೆ. ನಾವು ಉಳಿಸಿಕೊಂಡಿರುವ ಆಟಗಾರರು ಉತ್ತಮ ದಾಖಲೆ ಹೊಂದಿದ್ದಾರೆ. ತಂಡದಿಂದ ಬಿಡುಗಡೆ ಮಾಡುತ್ತಿರುವ ಆಟಗಾರರ ಬಗ್ಗೆಯೂ ನಮಗೆ ಗೌರವ ಇದೆ ಎಂದಿದ್ದಾರೆ.
ನಮ್ಮ ತಂಡವನ್ನು ಬಲಪಡಿಸಲು ನೋಡುತ್ತೇವೆ. ಆ ಕಾರಣಕ್ಕಾಗಿಯೇ ನಾವು ಬಲಿಷ್ಠ ಆಟಗಾರರನ್ನು ಉಳಿಸಿಕೊಂಡಿದ್ದೇವೆ. ಹಾಗಾಗಿ ನಾವು ಆರಾಮದಾಯಕವಾಗಿದ್ದೇವೆ ಎಂದು ಆಂಡಿ ಫ್ಲವರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.