ಬೆಂಗಳೂರು: ಇದೇ ವರ್ಷ (2022) ನಡೆದ19 ವರ್ಷದೊಳಗಿನವರ ಕ್ರಿಕೆಟ್ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕರಾಗಿದ್ದ ಯಶ್ ಧುಳ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ₹ 50 ಲಕ್ಷ ನೀಡಿ ಖರೀದಿಸಿದೆ.
ಧುಳ್ ನೇತೃತ್ವದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತ ತಂಡವು ದಾಖಲೆಯ 5ನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿತ್ತು. ಬಳಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದ ಧುಳ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ನಾಯಕ.ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ನಲ್ಲಿ ಆಡುವ ನೆಚ್ಚಿನ ಪ್ರಾಂಚೈಸ್ ಎಂದು ಹೇಳಿಕೊಂಡಿದ್ದರು.
ಅದರಂತೆ ಅವರೀಗ ಡೆಲ್ಲಿ ತಂಡ ಸೇರಿಕೊಂಡಿದ್ದು, ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ ನಾಯಕತ್ವದಲ್ಲಿ ಆಡಲಿದ್ದಾರೆ.
ಬಾವಾಗೆ ₹ 2 ಕೋಟಿ
ಧುಳ್ ಪಡೆ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ ಬಾವಾ ಅವರನ್ನು ಪಂಜಾಬ್ ಕಿಂಗ್ಸ್ ಪ್ರಾಂಚೈಸ್, ₹ 2 ಕೋಟಿ ನೀಡಿ ಖರೀದಿಸಿದೆ.
ಉಗಾಂಡ ವಿರುದ್ಧ ನಡೆದ ಪಂದ್ಯದಲ್ಲಿ ಬರೋಬ್ಬರಿ 162 ರನ್ ಚಚ್ಚಿದ್ದ ಬಾವಾ, ಭಾರತ 326 ರನ್ ಗಳ ಭಾರೀ ಜಯ ಸಾಧಿಸಲು ನೆರವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.