
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಮಿನಿ ಹರಾಜು ಪ್ರಕಿಯೆ ಡಿ.16ರಂದು ಅಬುಧಾಬಿಯಲ್ಲಿ ನಡೆಯುತ್ತಿದೆ.
ವಿಭಿನ್ನವಾಗಿ ಹರಾಜು ಪ್ರಕಿಯೆ ನಡೆಸಿಕೊಡುವ ಮೂಲಕ ಗಮನ ಸೆಳೆದಿರುವ 50 ವರ್ಷದ ಮಲ್ಲಿಕಾ ಸಾಗರ್ ಅವರು, ಐಪಿಎಲ್ ಇತಿಹಾಸದಲ್ಲೇ ಹರಾಜು ನಡೆಸಿಕೊಟ್ಟ ಮೊದಲ ಮಹಿಳೆಯಾಗಿದ್ದಾರೆ.
ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸ ವಿಷಯದಲ್ಲಿ ಪದವಿ ಪಡೆದಿರುವ ಮುಂಬೈ ಮೂಲದ ಮಲ್ಲಿಕಾ ಸಾಗರ್, 2001ರಿಂದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಹರಾಜು ಪ್ರಕ್ರಿಯೆ ನಡೆಸಿಕೊಡುವ ಭಾರತದ ಮೊದಲ ಮಹಿಳೆ ಎನ್ನುವ ಖ್ಯಾತಿ ಇವರಿಗಿದೆ.
2023ರಲ್ಲಿ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಅವರು ಮೊದಲ ಬಾರಿ ಪಾಲ್ಗೊಂಡಿದ್ದರು.
2018ರಿಂದ ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದ ಹಗ್ ಎಡ್ಮೀಡ್ಸ್ ಅವರು 2023ರ ಐಪಿಎಲ್ ಮಿನಿ ಹರಾಜಿನ ವೇಳೆ ಕುಸಿದು ಬಿದ್ದಿದ್ದರಿಂದ ಮಲ್ಲಿಕಾ ಸಾಗರ್ ಅವರಿಗೆ ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನೀಡಲಾಗಿತ್ತು.
2024 ಹಾಗೂ 2025ರ ಐಪಿಎಲ್ ಹಾಗೂ ಡಬ್ಲುಪಿಲ್ ಹರಾಜನ್ನು ಕೂಡ ಮಲ್ಲಿಕಾ ಸಾಗರ್ ಅವರೇ ಮಾಡಿದ್ದಾರೆ.
ಮಲ್ಲಿಕಾ ಸಾಗರ್ ಅವರು 2021ರಲ್ಲಿ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ನಡೆಸಿಕೊಡುವ ಮೂಲಕ, ಈ ಸಾಧನೆ ಮಾಡಿದ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.