
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವು ಮೂಲಬೆಲೆ ₹ 2 ಕೋಟಿಗೆ ಖರೀದಿಸಿದೆ.
ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ತೋರಿಸುತ್ತಿರುವ 31 ವರ್ಷದ ಬಲಗೈ ವೇಗಿ ಜಾಕೋಬ್ ಡಫಿ, ಸದ್ಯ ಅಂತರರಾಷ್ಟ್ರೀಯ ಟಿ–20 ಕ್ರಿಕೆಟ್‌ನಲ್ಲಿ ನಂಬರ್ 2 ಬೌಲರ್ ಆಗಿದ್ದಾರೆ. ಕೆಲವು ತಿಂಗಳ ಹಿಂದೆ, ನಂಬರ್ 1 ಬೌಲರ್ ಆಗಿದ್ದರು.
ಐಪಿಎಲ್ ಮಿನಿ ಹರಾಜಿನಲ್ಲಿ ₹2 ಕೋಟಿ ಮೂಲಬೆಲೆ ಹೊಂದಿದ್ದ ಜಾಕೋಬ್ ಡಫಿ ಅವರನ್ನು ಆರ್‌ಸಿಬಿ ಹೊರತುಪಡಿಸಿ ಯಾವ ತಂಡಗಳು ಕೂಡ ಖರೀದಿಸಲು ಮುಂದೆ ಬರಲಿಲ್ಲ. ಮೂಲಬೆಲೆಗೆ ಅವರು ಆರ್‌ಸಿಬಿ ಪಾಲಾದರು.
ಅಂತರರಾಷ್ಟ್ರೀಯ ಟಿ–20 ಕ್ರಿಕೆಟ್‌ನಲ್ಲಿ 38 ಪಂದ್ಯಗಳನ್ನು ಆಡಿರುವ ಢಪಿ, 36 ಇನಿಂಗ್ಸ್‌ನಲ್ಲಿ 53 ವಿಕೆಟ್ ಕಬಳಿಸಿದ್ದಾರೆ. 7.37 ಎಕಾನಮಿ ಹೊಂದಿದ್ದಾರೆ.
ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಜಾಕೋಬ್ ಡಫಿ, ಪವರ್‌ಪ್ಲೇನಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಡೆತ್ ಬೌಲಿಂಗ್‌ನಲ್ಲಿ ಕೂಡ ರನ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.