
ಅಬುಧಾಬಿ: ಐಪಿಎಲ್ 19ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್) ತಂಡವು ಹೊಸ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿತು.
2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್‌ನಲ್ಲಿ ಮಣಿಸಿ ಮೊದಲ ಟ್ರೋಫಿ ಎತ್ತಿ ಹಿಡಿದಿದ್ದ ಎಸ್‌ಆರ್‌ಎಚ್ ತಂಡವು, ನಂತರ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ವಿಫಲವಾಗಿದೆ.
ಸ್ಪೋಟಕ ಬ್ಯಾಟರ್‌ಗಳ ದಂಡೇ ಹೊಂದಿರುವ ಎಸ್‌ಆರ್‌ಎಚ್ ತಂಡವು ₹20.05 ಕೋಟಿ ಮೊತ್ತದೊಂದಿಗೆ ಮಿನಿ ಹರಾಜಿನಲ್ಲಿ ಭಾಗವಹಿಸಿತ್ತು. ಹರಾಜಿನಲ್ಲಿ 10 ಆಟಗಾರರನ್ನು ಖರೀದಿಸಿದರೂ, ತಂಡದ ಬಳಿ ಇನ್ನೂ ₹5.45 ಕೋಟಿ ಉಳಿದುಕೊಂಡಿದೆ.
ಎಸ್‌ಆರ್‌ಎಚ್ ತಂಡವು ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ₹13 ಕೋಟಿಗೆ ಖರೀದಿಸಿತ್ತು.
ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಬ್ರೈಡನ್ ಕಾರ್ಸೆ, ಇಶಾನ್ ಮಾಲಿಂಗ, ಹರ್ಷ್ ದುಬೆ, ಹರ್ಷಲ್ ಪಟೇಲ್, ಕ್ಲಾಸೆನ್, ಇಶಾನ್ ಕಿಶನ್, ಜಯದೇವ ಉನಾದ್ಕತ್, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್, ಸಮ್ರನ್ ರವಿಚಂದ್ರನ್, ಟ್ರಾವಿಸ್ ಹೆಡ್, ಜೀಶನ್ ಅನ್ಸಾರಿ, ಸಲೀಲ್ ಅರೋರಾ, ಶಿವಾಂಗ್ ಕುಮಾರ್, ಲಿವಿಂಗ್‌ಸ್ಟೋನ್, ಜ್ಯಾಕ್ ಎಡ್ವಡ್ಸ್, ಅಮಿತ್ ಕುಮಾರ್, ಕ್ರೇನ್ಸ್ ಫುಲೆಟ್ರಾ, ಶಕಿಬ್ ಉಸೇನ್, ಓಂಕಾರ್ ತರ್ಮಲೆ, ಪ್ರಫುಲ್ ಹಿಂಜ್, ಶಿವಂ ಮಾವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.