ADVERTISEMENT

ಐಪಿಎಲ್ ಸಭೆ ಇಂದು: ಪಂದ್ಯದ ವೇಳೆ ಕುರಿತು ಚರ್ಚೆ?

ಪಿಟಿಐ
Published 26 ಜನವರಿ 2020, 19:48 IST
Last Updated 26 ಜನವರಿ 2020, 19:48 IST
   

ನವದೆಹಲಿ: ಸೋಮವಾರ ಇಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಸಮಿತಿ ಸಭೆಯಲ್ಲಿ ಈ ಸಲದ ಟೂರ್ನಿಯಲ್ಲಿ ಪಂದ್ಯಗಳ ಸಮಯವನ್ನು ಮರುಪರಿಷ್ಕರಣೆ ಮಾಡುವ ಕುರಿತು ಚರ್ಚೆ ನಡೆಯಲಿದೆ.

ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹಾಜರಿರುವರು.

ಈ ಬಾರಿಯ ಟೂರ್ನಿಯಲ್ಲಿ ಐಪಿಎಲ್ ಪಂದ್ಯಗಳನ್ನು ರಾತ್ರಿ ಎಂಟರ ಬದಲು, 7.30ಕ್ಕೆ ಆರಂಭಿಸುವ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ADVERTISEMENT

ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ನಂತರ ಭಾರತವು ಆಡಲಿರುವ ಅಂತರರಾಷ್ಟ್ರೀಯ ಟೂರ್ನಿಗೆ ಕನಿಷ್ಠ 15 ದಿನಗಳ ಅಂತರವಿರಬೇಕು ಎಂದು ಲೋಧಾ ಸಮಿತಿಯ ಶಿಫಾರಸಿನ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

‘ಟೂರ್ನಿಯನ್ನು ಪ್ರಸಾರ ಮಾಡುವ ಅಧಿಕೃತ ಮಾಧ್ಯಮ ಸಂಸ್ಥೆಯು ಪಂದ್ಯಗಳು ರಾತ್ರಿ 7 ಅಥವಾ 7.30ಕ್ಕೆ ಆರಂಭವಾಗಬೇಕೆಂದು ಒತ್ತಾಯಿಸುತ್ತಿವೆ. ವಾರಾಂತ್ಯದ ದಿನಗಳಲ್ಲಿ ಎರಡು ಪಂದ್ಯಗಳು ಬೇಡ ಎಂದೂ ಆಗ್ರಹಿಸಿವೆ. ಆದ್ದರಿಂದ ಸಮಿತಿಯಲ್ಲಿ ಈ ವಿಷಯವು ಚರ್ಚೆಯಾಗುವ ಸಾಧ್ಯತೆ ಇದೆ’ ಎಂದು ಬಿಸಿಸಿಐ ಸದಸ್ಯರೊಬ್ಬರು
ತಿಳಿಸಿದ್ದಾರೆ.

‘2021ರಲ್ಲಿ ಐಪಿಎಲ್‌ ತಂಡಗಳ ಸಂಖ್ಯೆಯನ್ನು ಹತ್ತಕ್ಕೆ ಹೆಚ್ಚಿಸುವ ಕುರಿತೂ ಮಾತುಕತೆ ನಡೆಯಬಹುದು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.