ADVERTISEMENT

IPL Eliminator | ಮುಂಬೈ ಆರಂಭಿಕರ ಅಬ್ಬರ: ಗುಜರಾತ್‌ಗೆ 229 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮೇ 2025, 15:59 IST
Last Updated 30 ಮೇ 2025, 15:59 IST
   

ಮುಲ್ಲನಪುರ: ಆರಂಭಿಕ ಆಟಗಾರ ಉತ್ತಮ ಪ್ರದರ್ಶನದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 228 ರನ್‌ಗಳಿಸಿದೆ.

ಮುಲ್ಲನ್‌ಪುರದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ 81 ರನ್(50 ಎಸೆತ) ಹಾಗೂ ಜಾನಿ ಬೆಸ್ಟೊ 47 (22 ಎಸೆತ) ಮೊದಲ ವಿಕೆಟ್‌‌ಗೆ 84 ರನ್ ಜೊತೆಯಾಟವಾಡಿದರು. ಬೆಸ್ಟೊ ವಿಕೆಟ್ ಪಡೆಯುವ ಮೂಲಕ ಸಾಯಿ ಕಿಶೋರ್ ಈ ಜೊತೆಯಾಟವನ್ನು ಮುರಿದರು.

ಸೂರ್ಯ ಕುಮಾರ್ ಯಾದವ್ 33 ರನ್ (20 ಎಸೆತ) ಹಾಗೂ ತಿಲಕ ವರ್ಮಾ 25 ರನ್ (11 ಎಸೆತ) ಉಪಯುಕ್ತ ಆಟದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.

ADVERTISEMENT

ನಾಯಕ ಹಾರ್ದಿಕ್ ಪಾಂಡ್ಯ 22‌ ರನ್ (9ಎಸೆತ) ಅವರು ಇನ್ನಿಂಗ್ಸ್ ಕೊನೆಯಲ್ಲಿ ಅಬ್ಬರಿಸಿ ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿದರು.

ಗುಜರಾತ್ ಪರ ಸಾಯಿ ಕಿಶೋರ್ ಹಾಗೂ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು, ಸಿರಾಜ್ ಹಾಗೂ ಜೆರಾಲ್ಡ್ ಕಾಯೆಟ್ಜ್ಗ್ ತಲಾ ಒಂದು ವಿಕೆಟ್ ಪಡೆದರು.

ಎಲಿಮಿನೇಟರ್ ಪಂದ್ಯ ಗೆಲ್ಲಲು ಗುಜರಾತ್ 229 ರನ್ ಗಳಿಸಬೇಕಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.