ಮುಲ್ಲನಪುರ: ಐಪಿಎಲ್‌ನ 18ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಮುಂಬೈ ತಂಡದಲ್ಲಿ ಮೂರು ಬದಲಾವಣೆಗಳಾಗಿದ್ದು, ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ ಜಾಗದಲ್ಲಿ ಜಾನಿ ಬೆಸ್ಟೊ ಸ್ಥಾನ ಪಡೆದಿದ್ದಾರೆ. ಅಶ್ವಿನ್ ಕುಮಾರ್ ಜಾಗದಲ್ಲಿ ರಾಜ್ ಬಾವ, ರಿಚರ್ಡ್ ಗ್ಲೇಸನ್ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಗುಜರಾತ್ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು ಜೋಸ್ ಬಟ್ಲರ್ ಜಾಗದಲ್ಲಿ ಕುಶಾಲ್ ಮೆಂಡಿಸ್ ಅವರು ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ವಾಷಿಂಗ್‌ಟನ್ ಕೂಡ ತಂಡಕ್ಕೆ ಮರಳಿದ್ದಾರೆ.
ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಲೀಗ್ ಹಂತದಲ್ಲಿ 9 ಗೆಲುವಿನಿಂದ 18 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿ ಪ್ಲೇ- ಆಫ್ ಪ್ರವೇಶಿಸಿದೆ.
ಇನ್ನೊಂದೆಡೆ ಮೊದಲ 5 ಪಂದ್ಯಗಳಲ್ಲಿ 4ರಲ್ಲಿ ಸೋತಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು, ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಒಟ್ಟು 16 ಪಾಯಿಂಟ್‌ಗಳ ಮೂಲಕ ನಾಲ್ಕನೇ ತಂಡವಾಗಿ ಪ್ಲೇ-ಆಫ್ ಪ್ರವೇಶಿಸಿದೆ.
ಇದೀಗ ಮುಲ್ಲನ್‌ಪುರದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯದಲ್ಲಿ ಎರಡೂ ತಂಡಗಳು ಎದುರಾಗಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡವು ಎರಡನೇ ಕ್ಯಾಲಿಫೈಯರ್‌ನಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.
ಮುಂಬೈ ತಂಡ: ಹಾರ್ದಿಕ್ ಪಾಂಡ್ಯ(ನಾಯಕ), ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್, ಮಿಚೆಲ್ ಸ್ಯಾಂಟನರ್, ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ಜಾನಿ ಬೆಸ್ಟೊ, ರಾಜ್ ಬಾವ, ಗ್ಲೇಸನ್
ಗುಜರಾತ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಶಾರೂಕ್ ಖಾನ್, ರಾಹುಲ್ ತೆವಾಟಿಯಾ, ಶೆರ್ಫೆನ್ ರುದರ್‌ಫೋರ್ಡ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ವಾಷಿಂಗ್ಟನ್ ಸುಂದರ್, ಕುಶಾಲ್ ಮೆಂಡಿಸ್, ರಶೀದ್ ಖಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.