ADVERTISEMENT

ಐಪಿಎಲ್ ಲೋಗೊ ಎಬಿ ಡಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ: ಸೆಹ್ವಾಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2021, 10:23 IST
Last Updated 10 ಏಪ್ರಿಲ್ 2021, 10:23 IST
ಎಬಿ ಡಿ ಹೊಡೆತದ ಭಂಗಿ ಹೊಂದಿರುವ ಐಪಿಎಲ್ ಲೋಗೊ
ಎಬಿ ಡಿ ಹೊಡೆತದ ಭಂಗಿ ಹೊಂದಿರುವ ಐಪಿಎಲ್ ಲೋಗೊ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಲೋಗೊವನ್ನು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಅವರಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಲೋಗೊ ಎಬಿಡಿ ವಿಲಿಯರ್ಸ್ ಅವರ ಹೊಡೆತದ ಭಂಗಿಯನ್ನು ಹೋಲುತ್ತದೆ. ಇದೇ ಕಾರಣಕ್ಕಾಗಿ ವೀರು ಇಂತಹದೊಂದು ಹೇಳಿಕೆಯನ್ನು ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಎಬಿ ಡಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕೇವಲ 27 ಎಸೆತಗಳಲ್ಲಿ ಬಿರುಸಿನ 48 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದ್ದರು.

ADVERTISEMENT

'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ಬ್ಯಾಟ್ಸ್‌ಮನ್ಎಬಿ ಡಿ ವಿಲಿಯರ್ಸ್, ಐಪಿಎಲ್‌ನ ಅತಿ ಜನಪ್ರಿಯ ಆಟಗಾರರಲ್ಲಿ ಓರ್ವರೆನಿಸಿದ್ದಾರೆ. ಆರ್‌ಸಿಬಿ ಪಾಲಿಗೆ ಸದಾ ಆಪತ್ಭಾಂದವ ಎನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸೆಹ್ವಾಗ್, ಸಂಕಲ್ಪ ಶಕ್ತಿ ಎಂಬುದು ಡಿ ವಿಲಿಯರ್ಸ್ ಪವರ್‌ಗೆ ಸಮಾನವಾಗಿದೆ. ಐಪಿಎಲ್ ಲೋಗೊವನ್ನು ಎಬಿ ಡಿ ಅವರಿಗಾಗಿ ರಹಸ್ಯವಾಗಿ ವಿನ್ಯಾಸಗೊಳಿಸಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. 'ಚಾಂಪಿಯನ್ ಆಟ' ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿರುವ ಹರ್ಷಲ್ ಪಟೇಲ್ ಬೌಲಿಂಗ್ ದಾಳಿಯನ್ನು ನೋಡುವುದು ಖುಷಿ ಕೊಟ್ಟಿದ್ದು, ಅತ್ಯುತ್ತಮ ಸ್ಪೆಲ್‌ ಎಂದು ವೀರು ಗುಣಗಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.