ADVERTISEMENT

IPL 2023: ರಾಜಸ್ಥಾನ್ ರಾಯಲ್ಸ್‌ಗೆ 155 ರನ್ ಗುರಿ ನೀಡಿದ ಲಖನೌ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2023, 0:45 IST
Last Updated 20 ಏಪ್ರಿಲ್ 2023, 0:45 IST
   

ಜೈಪುರ: ಇಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡಕ್ಕೆ 155 ರನ್‌ಗಳ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಲಖನೌ ತಂಡಕ್ಕೆ ನಾಯಕ ಕೆ.ಎಲ್. ರಾಹುಲ್(39), ಕೈಲ್ ಮೇಯರ್ಸ್(51) ಉತ್ತಮ ಆರಂಭ ನೀಡಿದರು. ಬಳಿಕ ಬಂದ ಆಯುಶ್ ಬದೋನಿ(1), ದೀಪಕ್ ಹೂಡಾ(2) ನಿರಾಸೆ ಮೂಡಿಸಿದರು. ಹೀಗಾಗಿ, ಬೃಹತ್ ಮೊತ್ತ ಪೇರಿಸಲು ಲಖನೌ ತಂಡಕ್ಕೆ ಸಾಧ್ಯವಾಗಲಿಲ್ಲ.

ಮಾರ್ಕಸ್ ಸ್ಟೋಯ್ನಿಸ್(21), ನಿಕೋಲಸ್ ಪೂರನ್(29) ತಂಡದ ಗೌರವಾನ್ವಿತ ಮೊತ್ತಕ್ಕೆ ಕಾರಣರಾದರು.

ADVERTISEMENT

ರಾಜಸ್ಥಾನ ಬೌಲರ್‌ಗಳು ಲಖನೌ ತಂಡವನ್ನು 160ರ ಗಡಿಯಲ್ಲೇ ತಡೆಯುವಲ್ಲಿ ಸಫಲರಾದರು. 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್ ಯಶಸ್ವಿ ಬೌಲರ್ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.