
ರವೀಂದ್ರ ಜಡೇಜ –ಐಪಿಎಲ್ ಮೀಡಿಯಾ ಚಿತ್ರ
2026ರ ಐಪಿಎಲ್ ಟೂರ್ನಿಗೆ ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನೀಡಿದ್ದ ಗಡುವಿಗೂ ಮುನ್ನ ಫ್ರಾಂಚೈಸಿಗಳು ತಮ್ಮ ನಿರ್ಧಾರ ಪ್ರಕಟಿಸಿವೆ. ವಿಶೇಷವಾಗಿ ಐಪಿಎಲ್ ಇತಿಹಾಸದಲ್ಲಿ ಅತೀ ದೊಡ್ಡ ವ್ಯಾಪಾರ ಒಪ್ಪಂದದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳು ಭಾಗಿಯಾಗಿವೆ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ₹18 ಕೋಟಿಗೆ ವಿನಿಮಯ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಐಪಿಎಲ್ ಇತಿಹಾಸದ ಅತೀ ದೊಡ್ಡ ಟ್ರೇಡ್ ಎಂಬ ಹೆಗ್ಗಳಿಕೆಗೆ ಈ ಒಪ್ಪಂದ ಪಾತ್ರವಾಯಿತು.
ಸಂಜು ಸ್ಯಾಮ್ಸನ್ ಬದಲು ರಾಜಸ್ಥಾನ ತಂಡಕ್ಕೆ ರವೀಂದ್ರ ಜಡೇಜಾ (₹14 ಕೋಟಿ) ಹಾಗೂ ಆಲ್‌ರೌಂಡರ್ ಸ್ಯಾಮ್ ಕರನ್ (₹2.5 ಕೋಟಿ) ಅವರನ್ನು ಬಿಟ್ಟುಕೊಟ್ಟಿದೆ.
ಕ್ಯಾಮರೂನ್ ಗ್ರೀನ್: 2024ರಲ್ಲಿ ಮುಂಬೈ ಇಂಡಿಯನ್ಸ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ₹17.5 ಕೋಟಿಗೆ ಟ್ರೇಡ್ ಆಗಿದ್ದರು. ಇದು ಈ ಹಿಂದಿನ ಅತೀ ದೊಡ್ಡ ವಿನಿಮಯ ಒಪ್ಪಂದವಾಗಿತ್ತು.
ಹಾರ್ದಿಕ್ ಪಾಂಡ್ಯ: 2024ರಲ್ಲಿ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈಗೆ ಮರಳಿದ ಹಾರ್ದಿಕ್ ಪಾಂಡ್ಯಗೆ ಎಂಐ ಫ್ರಾಂಚೈಸಿ ₹15 ಕೋಟಿ ನೀಡಿ ಖರೀದಿಸಿತ್ತು.
ರವೀಂದ್ರ ಜಡೇಜ: 2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆಟಗಾರರ ವ್ಯಾಪಾರ ವಿನಿಮಯದ ಮೂಲಕ ಜಡೇಜ ಅವರಿಗೆ ₹14 ಕೋಟಿ ನೀಡಿ ಚೆನ್ನೈ ತಂಡದಿಂದ ರಾಜಸ್ಥಾನ ಫ್ರಾಂಚೈಸಿ ಖರೀದಿಸಿದೆ.
ಶಾರ್ದೂಲ್ ಠಾಕೂರ್: 2022 ರಲ್ಲಿ ಕೆಕೆಆರ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ನಿಂದ ₹10.75 ಕೋಟಿಗೆ ಶಾರ್ದೂಲ್ ಅವರನ್ನು ಖರೀದಿಸಿತು.
ಲೂಕಿ ಫರ್ಗ್ಯೂಸನ್: 2023 ರಲ್ಲಿ ಗುಜರಾತ್ ಟೈಟಾನ್ಸ್‌ನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ₹10 ಕೋಟಿ ನೀಡಿ ನ್ಯೂಜಿಲೆಂಡ್ ವೇಗಿ ಲೂಕಿ ಫರ್ಗ್ಯೂಸನ್ ಅವರನ್ನು ಖರೀದಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.