ADVERTISEMENT

'ಸರಿಯಾದ ದಿಶೆಯತ್ತ ದಿಟ್ಟ ಹೆಜ್ಜೆ' - ಕೊಹ್ಲಿ ಅರ್ಧಶತಕದ ಬಗ್ಗೆ ನಾಯಕ ಡುಪ್ಲೆಸಿ

ಪಿಟಿಐ
Published 1 ಮೇ 2022, 10:16 IST
Last Updated 1 ಮೇ 2022, 10:16 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.

ಆದರೂ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿರುವುದು ನಾಯಕ ಫಫ್ ಡುಪ್ಲೆಸಿ ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ ಇದು 'ಸರಿಯಾದ ದಿಶೆಯತ್ತ ಇಟ್ಟಿರುವ ಒಂದು ದಿಟ್ಟ ಹೆಜ್ಜೆ' ಎಂದು ಶ್ಲಾಘಿಸಿದ್ದಾರೆ.

ಎರಡು ಗೋಲ್ಡನ್ ಡಕ್ ಸೇರಿದಂತೆ ಸತತ ವೈಫಲ್ಯಕ್ಕೊಳಗಾಗಿದ್ದ ಕೊಹ್ಲಿ, ಕೊನೆಗೂ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

53 ಎಸೆತಗಳನ್ನು ಎದುರಿಸಿದ ಕೊಹ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದ್ದರು.

'ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳ ಪೈಕಿ ಓರ್ವ ಬ್ಯಾಟರ್ ದೀರ್ಘ ಇನ್ನಿಂಗ್ಸ್ ಕಟ್ಟುವ ಮಹತ್ವದ ಕುರಿತು ಡುಪ್ಲೆಸಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಕೊಹ್ಲಿ ಇನ್ನಿಂಗ್ಸ್ ಉತ್ತಮ ಸಂಕೇತವಾಗಿದೆ' ಎಂದು ಹೇಳಿದ್ದಾರೆ.

'ನಾವು 175ರಿಂದ 180 ರನ್ ಗಳಿಸಲು ಪ್ರಯತ್ನಪಟ್ಟಿದ್ದೆವು. ಆದರೆ ಗುಜರಾತ್ ತಂಡವು ಅತ್ಯುತ್ತಮ ಬೌಲಿಂಗ್ ಮಾಡಿತು. ಈ ಮೂಲಕ ನಾವು ಹಿನ್ನಡೆ ಎದುರಿಸಿದೆವು' ಎಂದು ಹೇಳಿದ್ದಾರೆ.

ಏತನ್ಮಧ್ಯೆ ಎದುರಾಳಿ ತಂಡವು ಸಮರ್ಥವಾಗಿ ಒತ್ತಡವನ್ನು ನಿಭಾಯಿಸಲು ಯಶಸ್ವಿಯಾಯಿತು ಎಂದು ಸೋಲಿಗೆ ಡುಪ್ಲೆಸಿ ಕಾರಣ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.