ADVERTISEMENT

ಪಾಂಟಿಂಗ್ ದಾಖಲೆ ಸರಿಗಟ್ಟಿದ ಜೋ ರೂಟ್: ಸಚಿನ್‌ರ ಅತ್ಯಧಿಕ ರನ್‌ಗೆ ಇನ್ನೂ ಸನಿಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2026, 9:54 IST
Last Updated 5 ಜನವರಿ 2026, 9:54 IST
<div class="paragraphs"><p>ಜೋ ರೂಟ್</p></div>

ಜೋ ರೂಟ್

   

ಸಿಡ್ನಿ: ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಲಯದಲ್ಲಿರುವ ಇಂಗ್ಲೆಂಡ್ ತಂಡದ ತಾರಾ ಬ್ಯಾಟರ್ ಜೋ ರೂಟ್ ಅವರು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಆ ಮೂಲಕ ಸಚಿನ್ ತೆಂಡುಲ್ಕರ್ ಅವರ ಅತ್ಯಧಿಕ ಟೆಸ್ಟ್ ಶತಕ ಹಾಗೂ ಹೆಚ್ಚು ರನ್ ಗಳಿಕೆಯ ದಾಖಲೆ ಸನಿಹಕ್ಕೆ ಬರುತ್ತಿದ್ದಾರೆ.

ಅತೀ ಹೆಚ್ಚು ಶತಕದಲ್ಲಿ ಮೂರನೇ ಸ್ಥಾನ

ADVERTISEMENT

ಅಮೋಘ ಲಯದಲ್ಲಿರುವ ಜೋ ರೂಟ್ ಅವರು, ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಎರಡನೇ ಶತಕ ದಾಖಲಿಸಿದ್ದಾರೆ. ಈ ಬಾರಿಯ ಆ್ಯಷಸ್ ಟೆಸ್ಟ್ ಸರಣಿಯೊಂದರಲ್ಲೆ ಅವರು 2ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ಸಿಡ್ನಿಯಲ್ಲಿ ನಡೆಯುತ್ತಿರುವ 5ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಮಾತ್ರವಲ್ಲ, ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ರಿಕಿ ಪಾಂಟಿಂಗ್ ಅವರು ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ 41 ಶತಕ ಸಿಡಿಸಿದ್ದರು. ಇದೀಗ ಅಷ್ಟೇ ಶತಕ ಸಿಡಿಸುವ ಮೂಲಕ ರೂಟ್ ಅವರು ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದವರು

  • ಸಚಿನ್ ತೆಂಡೂಲ್ಕರ್ – 51 ಶತಕ

  • ಜಾಕ್ ಕಾಲೀಸ್ – 45 ಶತಕ

  • ಜೋ ರೂಟ್ – 41 ಶತಕ

  • ರಿಕಿ ಪಾಂಟಿಂಗ್ – 41 ಶತಕ

  • ಕುಮಾರ ಸಂಗಕ್ಕಾರ – 38 ಶತಕ

ಆಸ್ಟ್ರೇಲಿಯಾ ವಿರುದ್ಧದ 5ನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ರೂಟ್ ಅವರು, 242 ಎಸೆತಗಳಲ್ಲಿ 15 ಬೌಂಡರಿ ಸಹಿತ 160 ರನ್ ಕಲೆಹಾಕಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 13,937 ರನ್ ಕಲೆಹಾಕಿದ್ದಾರೆ.

ರನ್ ಗಳಿಕೆಯ‌ಲ್ಲಿ ಸಚಿನ್ ಸಮೀಪಕ್ಕೆ ರೂಟ್

ಜೋ ರೂಟ್ ಅವರು 1,984 ರನ್‌ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.