ADVERTISEMENT

ಇಂಗ್ಲೆಂಡ್‌ನ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ವಿರುದ್ಧ ಶೋಯಬ್‌ ಅಖ್ತರ್‌ ಕಿಡಿ

ಪಿಟಿಐ
Published 18 ಆಗಸ್ಟ್ 2019, 14:30 IST
Last Updated 18 ಆಗಸ್ಟ್ 2019, 14:30 IST
ಶೋಯಬ್‌ ಅಖ್ತರ್‌
ಶೋಯಬ್‌ ಅಖ್ತರ್‌   

ನವದೆಹಲಿ: ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಇಂಗ್ಲೆಂಡ್‌ನ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ವಿರುದ್ಧ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯಬ್‌ ಅಖ್ತರ್‌ ಕಿಡಿ ಕಾರಿದ್ದಾರೆ.

ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಜೋಫ್ರಾ ಹಾಕಿದ ಬೌನ್ಸರ್‌ ಎಸೆತವು ಆಸ್ಟ್ರೇಲಿಯಾದ ಸ್ಮಿತ್‌ ಅವರ ಹೆಲ್ಮೆಟ್‌ಗೆ ಬಡಿದಿತ್ತು. ನೆಲಕ್ಕೆ ಕುಸಿದಿದ್ದ ಸ್ಮಿತ್‌ ನೋವಿನಿಂದ ನರಳುತ್ತಿದ್ದರೂ ಕೂಡ ಅವರನ್ನು ಜೋಫ್ರಾ ಮಾತನಾಡಿಸಿರಲಿಲ್ಲ.

‘ಎದುರಾಳಿ ಆಟಗಾರನನ್ನು ವಿಚಲಿತಗೊಳಿಸಲು ಬೌಲರ್‌ಗಳು ಬೌನ್ಸರ್‌ ಪ್ರಯೋಗಿಸುವುದು ಸಾಮಾನ್ಯ. ಒಂದೊಮ್ಮೆ ಚೆಂಡು ಬ್ಯಾಟ್ಸ್‌ಮನ್‌ನ ತಲೆಗೆ ಬಡಿದು ಆತ ನೋವಿನಿಂದ ನರಳುತ್ತಿದ್ದರೆ ಬೌಲರ್‌ಗಳು ಕೂಡಲೇ ಆತನ ಬಳಿ ಹೋಗಿ ಸೌಜನ್ಯಕ್ಕಾದರೂ ಏನಾಯಿತೆಂದು ವಿಚಾರಿಸಬೇಕು. ಅದು ಕ್ರೀಡಾಪಟುವಿನ ಧರ್ಮ. ಆದರೆ ಜೋಫ್ರಾ ಹಾಗೆ ಮಾಡಲಿಲ್ಲ. ತನಗೆ ಸಂಬಂಧವಿಲ್ಲದಂತೆಯೇ ವರ್ತಿಸಿದರು. ಅವರ ಆ ನಡವಳಿಕೆ ನನಗೆ ಬೇಸರ ತರಿಸಿತು’ ಎಂದು ಅಖ್ತರ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.