
ಕೇನ್ ವಿಲಿಯಮ್ಸನ್
ಪಿಟಿಐ ಚಿತ್ರ
ಆಕ್‌ಲ್ಯಾಂಡ್: ಆಕರ್ಷಕ ಬ್ಯಾಟರ್ ಮತ್ತು ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಭಾನುವಾರ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿ ಪ್ರಾರಂಭವಾಗುವ ಕೆಲವು ದಿನಗಳ ಮೊದಲೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ನ್ಯೂಜಿಲೆಂಡ್ ಪರ 93 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್ ಅವರನ್ನು ಇತ್ತೀಚೆಗೆ 2026ರ ಋತುವಿಗಾಗಿ ಐಪಿಎಲ್ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್‌ನ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು.
ನಿವೃತ್ತಿ ಘೋಷಣೆಯ ನಂತರ, 35 ವರ್ಷದ ಅಗ್ರ ಕ್ರಮಾಂಕದ ಬ್ಯಾಟರ್ ಅವರನ್ನು ಬುಧವಾರ ಇಲ್ಲಿ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ 14 ಸದಸ್ಯರ ಟಿ20 ತಂಡದಲ್ಲಿ ಅವರಿಗೆ ಅವಕಾಶ ನೀಡಲಾಗಿಲ್ಲ.
ಟಿ20 ಕ್ರಿಕೆಟ್‌ನಲ್ಲಿ 2575 ರನ್ ಗಳಿಸಿದ್ದು, ಮುಂಬರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಮೂರು ಟೆಸ್ಟ್‌ಗಳ ಮೇಲೆ ಕೇಂದ್ರೀಕರಿಸಲು ವಿಲಿಯಮ್ಸನ್, ಏಕದಿನ ಸರಣಿಯಿಂದಲೂ ಸಹ ಹೊರಗುಳಿಯಲಿದ್ದಾರೆ.
ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ನ್ಯೂಜಿಲೆಂಡ್‌ನ ಎರಡನೇ ಆಟಗಾರನಾಗಿ ಅವರು ನಿವೃತ್ತರಾಗುತ್ತಿದ್ದಾರೆ. ಇದರಲ್ಲಿ 18 ಅರ್ಧಶತಕಗಳು ಮತ್ತು 95 ಗರಿಷ್ಠ ಮೊತ್ತ ಸೇರಿದೆ.
ಎಲ್ಲ ಮಾದರಿಯೆ ಕ್ರಿಕೆಟ್‌ನಿಂದ 19,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.