ಬೆಂಗಳೂರು: ಲಾಕ್‌ಡೌನ್ ಸಮಯದಲ್ಲಿ ಅಣ್ಣಂದಿರೊಂದಿಗೆ ಮನೆಯಂಗಳದಲ್ಲಿ ಕ್ರಿಕೆಟ್ ಆಡಿದ ಕೆರ್ವಾಶ ಗ್ರಾಮದ ಯುವತಿಯೊಬ್ಬರು ತೋರಿದ ಕವರ್ ಡ್ರೈವ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಜ್ಯೋತಿಯೇ ಆ ಯುವತಿ. ತಮ್ಮ ಮನೆಯ ಅಂಗಳದಲ್ಲಿ ಬ್ಯಾಟಿಂಗ್ ಮಾಡಿದ ಜ್ಯೋತಿ, ತಮ್ಮ ಸಹೋದರ ಹಾಕಿದ ಅಂಡರ್ ಆರ್ಮ್ ಎಸೆತ (ಟೆನಿಸ್ ಬಾಲ್)ವೊಂದನ್ನು ಕವರ್ ಡ್ರೈವ್ ಮಾಡಿದ್ದಾರೆ. ಅದೂ ಲೆಗ್‌ಸೈಡ್ ವೈಡ್ ಇದ್ದ ಎಸೆತವನ್ನು ಮುಂದಡಿ ಹೋಗಿ ಮಾಡಿದ ಡ್ರೈವ್ ಹಲವರನ್ನು ಆಕರ್ಷಿಸಿದೆ.
ರಂಜಿತ್ ಎಂಬುವವರು ಈವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಇಎಸ್‌ಪಿಎನ್ ಕ್ರಿಕ್ ಇನ್ಫೋ ಟ್ವೀಟ್ ಮಾಡಿ, ’ಸ್ಟೆಪಿಂಗ್ ಇಟ್ ಔಟ್‌ಸೈಡ್ ದ ಲೆಗ್ ಎಂಡ್ ಸ್ಮ್ಯಾಷಿಂಗ್ ಇಟ್ ತ್ರೂ ಕವರ್ಸ್‘ ಎಂದು ಒಕ್ಕಣೆ ಬರೆದಿದೆ.
ಇದು ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.