ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕ ತಂಡದ ಭಾರಿ ಮೊತ್ತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 23:26 IST
Last Updated 14 ಫೆಬ್ರುವರಿ 2026, 23:26 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಕೆಳಕ್ರಮಾಂಕದ ಆಟಗಾರರ ಉಪಯುಕ್ತ ಆಟದ ನೆರವಿನಿಂದ ಕರ್ನಾಟಕ ತಂಡವು, ಹಿಮಾಚಲ ಪ್ರದೇಶದ ನದೋನ್‌ನಲ್ಲಿ ನಡೆಯುತ್ತಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಡಿ ಗುಂಪಿನ ಪಂದ್ಯದಲ್ಲಿ ಶನಿವಾರ 537 ರನ್‌ಗಳ ದೊಡ್ಡ ಮೊತ್ತ ಪೇರಿಸಿತು. ಉತ್ತರವಾಗಿ ಆತಿಥೇಯ ಹಿಮಾಚಲ ಪ್ರದೇಶ ಹೋರಾಟ ಪ್ರದರ್ಶಿಸಿದ್ದು 1 ವಿಕೆಟ್‌ಗೆ 114 ರನ್ ಗಳಿಸಿದೆ.

ADVERTISEMENT

3 ವಿಕೆಟ್‌ಗೆ 352 ರನ್‌ಗಳೊಡನೆ ಎರಡನೇ ದಿನದಾಟ ಮುಂದುವರಿಸಿದ ಕರ್ನಾಟಕ 47 ರನ್ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡಿತು. ಆದರೆ ಹಾರ್ದಿಕ್ ರಾಜ್ (75 ರನ್) ಮತ್ತು ಯಶೋವರ್ಧನ ಪರಂತಾಪ್ (51) ಒಂಬತ್ತನೇ ವಿಕೆಟ್‌ಗೆ 127 (211 ಎ) ಸೇರಿಸಿ ಮೊತ್ತವನ್ನು 500 ದಾಟಿಸಿದರು.

ಸ್ಕೋರುಗಳು: ಕರ್ನಾಟಕ: 142.2 ಓವರುಗಳಲ್ಲಿ 537 (ಅನೀಶ್ವರ ಗೌತಮ್ 42, ಹಾರ್ದಿಕ್ ರಾಜ್ 75, ಯಶೋವರ್ಧನ ಪರಂತಾಪ್ 51; ಪ್ರಶಾಂತ್ ಕುಮಾರ್ 93ಕ್ಕೆ6); ಹಿಮಾಚಲ ಪ್ರದೇಶ: 1 ವಿಕೆಟ್‌ಗೆ 114 (ಸಾಗರ್ ಮಲ್ಹನ್ 54, ಅತುಲ್ ಎ.ಜಸ್ವಾಲ್ ಔಟಾಗದೇ 35)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.