ADVERTISEMENT

ನ್ಯೂಜಿಲೆಂಡ್‌ನ ವೇಗದ ದಾಳಿ ಭಾರತಕ್ಕೆ ಸವಾಲಾಗಲಿದೆ: ಅಗರ್ಕರ್

ಪಿಟಿಐ
Published 10 ಜೂನ್ 2021, 10:27 IST
Last Updated 10 ಜೂನ್ 2021, 10:27 IST
ಅಜಿತ್ ಅಗರ್ಕರ್: ಡೆಕ್ಕನ್ ಹೆರಾಲ್ಡ್ ಸಂಗ್ರಹ ಚಿತ್ರ
ಅಜಿತ್ ಅಗರ್ಕರ್: ಡೆಕ್ಕನ್ ಹೆರಾಲ್ಡ್ ಸಂಗ್ರಹ ಚಿತ್ರ   

ನವದೆಹಲಿ: ಪರಿಚಿತ ಇಂಗ್ಲೆಂಡ್ ಪಿಚ್‌ಗಳಲ್ಲಿ ಸದಾ ಉತ್ತಮ ಪ್ರದರ್ಶನ ನೀಡಲು ಸಿದ್ಧವಾಗಿರುವ ಪ್ರಬಲ ವೇಗದ ದಾಳಿಯ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವು ಕಠಿಣ ಸವಾಲು ಎದುರಿಸಏಕಾಗುತ್ತದೆ ಎಂದು ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯವು ಇದೇ 18ರಿಂದ 22ರವರೆಗೆ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

ಈ ಪಂದ್ಯದಲ್ಲಿ ಕಿವೀಸ್‌ನಿಮದ ಭಾರತವು ಪ್ರಬಲ ಸವಾಲು ಎದುರಸಬೇಕಾಗುತ್ತದೆ ಎಂದು ಸ್ಟಾರ್ ಸ್ಫೋರ್ಟ್ಸ್‌ನ ಗೇಮ್ ಶೋನಲ್ಲಿ ಹೇಳಿದ್ದಾರೆ.

ADVERTISEMENT

‘ನ್ಯೂಜಿಲೆಂಡ್ ತಂಡದ ವೇಗದ ದಾಳಿಯಲ್ಲಿ ನಿಸ್ಸಂಶಯವಾಗಿ ಬಹಳಷ್ಟು ವೈವಿಧ್ಯತೆ ಇದೆ. ನನ್ನ ಪ್ರಕಾರ ನೀವು (ಕೈಲ್) ಜೆಮಿಸನ್ ಅವರಂತಹ ಎತ್ತರದ ವ್ಯಕ್ತಿ ಭಾರತಕ್ಕೆ ವಿಭಿನ್ನ ಸವಾಲನ್ನು ಒಡ್ಡುತ್ತಾರೆ’ ಎಂದು ಅಗರ್ಕರ್ ಹೇಳಿದರು.

ನಂತರ ಅವರು ನ್ಯೂಜಿಲೆಂಡ್‌ನ ವೇಗದ ಜೋಡಿ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಅವರನ್ನು ಉಲ್ಲೇಖಿಸಿದರು. ಜೊತೆಗೆ, ನೀಲ್ ವ್ಯಾಗ್ನರ್ ತಮ್ಮ ವೇಗದಿಂದ ಆಚ್ಚರಿಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರು.

‘ಬೌಲ್ಟ್ ಮತ್ತು ಸೌಥಿ ಇಬ್ಬರೂ ಉತ್ತಮವಾಗಿ ಬೌಲ್ ಮಾಡುತ್ತಾರೆ. ಒಂದು ಎಸೆತವು ನಿಮ್ಮೊಳಗೆ ಬರುತ್ತದೆ, ಒಂದು ಎಸೆತವು ನಿಮ್ಮಿಂದ ದೂರ ಹೋಗುತ್ತದೆ. ತದನಂತರ ಏನೂ ಆಗದಿದ್ದಾಗ ವ್ಯಾಗ್ನರ್ ಬಂದು ಏನನ್ನಾದರೂ ಮಾಡುತ್ತಾರೆ. ನಿರಂತರವಾಗಿ ಅವರು ಅದನ್ನು ಮಾಡುತ್ತಾ ಬಂದಿದ್ದಾರೆ. ಆದ್ದರಿಂದ, ಸವಾಲುಗಳು ಸ್ವಲ್ಪ ವಿಭಿನ್ನವಾಗಿವೆ.’ ಎಂದಿದ್ದಾರೆ.

ಸೌತಾಂಪ್ಟನ್‌ ಪರಿಸ್ಥಿತಿಗಳ ಬಗ್ಗೆ ನ್ಯೂಜಿಲೆಂಡ್‌ನವರಿಗೆ ಹೆಚ್ಚು ಪರಿಚಿತವಿದೆ ಎಂದು ಸಹ ಅಗರ್ಕರ್‌ ತಿಳಿದಿದ್ದಾರೆ..

‘ಅಲ್ಲಿನ ಪರಿಸ್ಥಿತಿ ಸಹ ನ್ಯೂಜಿಲೆಂಡ್‌ ಆಟಗಾರರಿಗೆ ಅನುಕೂಲಕರವಾಗಿರಲಿದೆ. ಏಕೆಂದರೆ, ನೀವು ಆಡುತ್ತಿರುವುದು ಇಂಗ್ಲೆಂಡ್‌ನಲ್ಲಿ. ಅದು ಬಹುತೇಕ ಪಿಚ್ ನ್ಯೂಜಿಲೆಂಡ್ ರೀತಿಯೇ ಇರುತ್ತದೆ. ಹಾಗಾಗಿ, ಡ್ಯೂಕ್ ಚೆಂಡಿನಲ್ಲಿ ಸ್ವಿಂಗ್ ಹೆಚ್ಚಾಗುತ್ತದೆ. ಹೀಗಾಗಿ, ಸವಾಲುಗಳು ಬಹಳಷ್ಟಿವೆ’ಎಂದು ಅವರು ಹೇಳಿದ್ದಾರೆ.

‘ಆಸ್ಟ್ರೇಲಿಯಾ ಪ್ರವಾಸದ ನಂತರ ಇತ್ತೀಚಿನ ದಿನಗಳಲ್ಲಿ ಭಾರತವು ವಿದೇಶಗಳಲ್ಲಿ ಯಾವುದೇ ಟೆಸ್ಟ್ ಕ್ರಿಕೆಟ್ ಆಡಿಲ್ಲ, ಆಸ್ಟ್ರೇಲಿಯಾದ ಪರಿಸ್ಥಿತಿಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಅದಕ್ಕಾಗಿಯೇ ಭಾರತ ತಂಡಕ್ಕೆ ಪೂರ್ವ ಸಿದ್ಧತೆ ಅತ್ಯಂತ ಪ್ರಮುಖ’ಎಂದು ಅಗರ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.