ADVERTISEMENT

ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟ; ಕನ್ನಡಿಗ ರಾಹುಲ್‌ಗೆ ನಾಯಕ ಪಟ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2021, 16:13 IST
Last Updated 31 ಡಿಸೆಂಬರ್ 2021, 16:13 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಕೆ.ಎಲ್. ರಾಹುಲ್‌ಗೆ ನಾಯಕ ಪಟ್ಟ ಒಲಿದಿದೆ.

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದ ಬಿಸಿಸಿಐ, ರೋಹಿತ್ ಶರ್ಮಾ ಅವರಿಗೆ ಕಪ್ತಾನಗಿರಿ ವಹಿಸಿತ್ತು. ಆದರೆ ರೋಹಿತ್ ಗಾಯಗೊಂಡ ಪರಿಣಾಮ ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಹುಲ್‌ಗೆ ತಂಡವನ್ನು ಮುನ್ನಡೆಸುವ ಅದೃಷ್ಟ ಲಭಿಸಿದೆ.

ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಉಪನಾಯಕ ಆಗಿರಲಿದ್ದಾರೆ.

ರಾಹುಲ್ ಮುಂದಾಳತ್ವದ ತಂಡದಲ್ಲಿ ವಿರಾಟ್ ಕೊಹ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅನುಭವಿ ಶಿಖರ್ ಧವನ್, ಭುವನೇಶ್ವರ್ ಕುಮಾರ್ ಹಾಗೂ ಯಜುವೇಂದ್ರ ಚಾಹಲ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಸ್ಥಾನ ಗಿಟ್ಟಿಸಿದ್ದಾರೆ. ಮಗದೋರ್ವ ಕನ್ನಡಿಗ ಪ್ರಸಿದ್ದ ಕೃಷ್ಣ ತಂಡದಲ್ಲಿದ್ದಾರೆ.

ಟೀಮ್ ಇಂಡಿಯಾ ಇಂತಿದೆ:
1. ಕೆ.ಎಲ್. ರಾಹುಲ್ (ನಾಯಕ)
2. ವಿರಾಟ್ ಕೊಹ್ಲಿ
3. ಶಿಖರ್ ಧವನ್
4. ಋತುರಾಜ್ ಗಾಯಕವಾಡ್
5. ಸೂರ್ಯಕುಮಾರ್ ಯಾದವ್,
6. ಶ್ರೇಯಸ್ ಅಯ್ಯರ್
7. ವೆಂಕಟೇಶ್ ಅಯ್ಯರ್
8. ರಿಷಭ್ ಪಂತ್ (ವಿಕೆಟ್ ಕೀಪರ್)
9. ಇಶಾನ್ ಕಿಶನ್ (ವಿಕೆಟ್ ಕೀಪರ್)
10. ಯಜುವೇಂದ್ರ ಚಾಹಲ್,
11. ವಾಷಿಂಗ್ಟನ್ ಸುಂದರ್,
12. ಜಸ್‌ಪ್ರೀತ್ ಬೂಮ್ರಾ (ಉಪನಾಯಕ)
13. ಭುವನೇಶ್ವರ್ ಕುಮಾರ್
14. ದೀಪಕ್ ಚಾಹರ್
15. ಪ್ರಸಿದ್ದ ಕೃಷ್ಣ
16. ಶಾರ್ದೂಲ್ ಠಾಕೂರ್
17. ಮೊಹಮ್ಮದ್ ಸಿರಾಜ್
18. ಆರ್. ಅಶ್ವಿನ್

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಜನವರಿ 19, 21 ಹಾಗೂ 23ನೇ ದಿನಾಂಕಗಳಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.