ADVERTISEMENT

4ನೇ ಬಾರಿಗೆ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ಕೊಹ್ಲಿ

ಪಿಟಿಐ
Published 25 ಜನವರಿ 2024, 14:14 IST
Last Updated 25 ಜನವರಿ 2024, 14:14 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ದುಬೈ: ವಿಶ್ವಕಪ್ ಸೇರಿದಂತೆ ಏಕದಿನ ಕ್ರಿಕೆಟ್‌ನಲ್ಲಿ ಅದ್ಬುತ ಪ್ರದರ್ಶನ ತೋರಿದ ಭಾರತದ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಅವರಿಗೆ 2023ರ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. 4ನೇ ಬಾರಿಗೆ ಅವರು ಈ ಪ್ರಶಸ್ತಿ ಪಡೆಯುತ್ತಿದ್ದಾರೆ.

2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ನಂತರ 2ನೇ ಅತ್ಯಧಿಕ ರನ್ ಗಳಿಸಿದ ಆಟಗಾರ ವಿರಾಟ್ ಕೊಹ್ಲಿ ಆಗಿದ್ದಾರೆ.

ಕಳೆದ ವರ್ಷ ಕೊಹ್ಲಿ, 6 ಶತಕ ಮತ್ತು 8 ಅರ್ಧ ಶತಕ ಸೇರಿ ಒಟ್ಟು 1,377 ರನ್ ಸಿಡಿಸಿದ್ದಾರೆ.

ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕಗಳ ದಾಖಲೆಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದ ವಿರಾಟ್ ಅವರಿಗೆ ಈ ವರ್ಷ(2023) ಅವಿಸ್ಮರಣೀಯವಾಗಿದೆ. ಅಲ್ಲದೆ, ವಿಶ್ವಕಪ್‌ನಲ್ಲಿ 11 ಪಂದ್ಯಗಳಿಂದ 765 ರನ್ ಸಿಡಿಸಿ ಸರಣಿ ಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು.

ತಮ್ಮ ಅಮೋಘ ವೃತ್ತಿ ಜೀವನದಲ್ಲಿ ಕೊಹ್ಲಿ ಗಳಿಸಿದ 7ನೇ ಐಸಿಸಿ ಪ್ರಶಸ್ತಿ ಇದಾಗಿದೆ. 2012, 2017 ಮತ್ತು 2018 ಸೇರಿ ಏಕದಿನ ಮಾದರಿಯಲ್ಲಿ ಕೊಹ್ಲಿ ಪಡೆದ ನಾಲ್ಕನೇ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಇದಾಗಿದೆ.

2018ರಲ್ಲಿ ಅವರು ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಸಹ ಗೆದ್ದಿದ್ದರು. 2017 ಮತ್ತು 2018ಲ್ಲಿ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ಸಹ ಗೆದ್ದಿದ್ದರು.

ಭಾರತದ ಆರಂಭಿಕ ಕ್ರಿಕೆಟಿಗ ಶುಭಮನ್ ಗಿಲ್, ಮೊಹಮ್ಮದ್ ಶಮಿ ಹಾಗೂ ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್ ಪೈಪೋಟಿ ಎದುರಿಸಿದ ಕೊಹ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.