ಬೆಂಗಳೂರು: ಆಲ್‌ರೌಂಡ್ ಆಟವಾಡಿದ ಕೋಲಾರದ ಶ್ರೀ ಆರ್‌ವಿ ಶಾಲೆ ತಂಡ ಬಿಟಿಆರ್ ಶೀಲ್ಡ್‌ಗಾಗಿ ಕೆಎಸ್‌ಸಿಎ ಆಶ್ರಯದಲ್ಲಿ ನಡೆದ 14 ವರ್ಷದೊಳಗಿನವರ ಗುಂಪು ಒಂದು, ಮೂರನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದಿತು.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್‌ವಿ ಶಾಲೆ ತಂಡ ವೀನಸ್ ಇಂಟರ್‌ನ್ಯಾಷನಲ್ ಶಾಲೆ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ವೀನಸ್ ಶಾಲೆ 36.5 ಓವರ್‌ಗಳಲ್ಲಿ 145 ರನ್ ಗಳಿಸಿತು. ನಿಖಿಲ್ ಮತ್ತು ಗಗನ್ ಗೌಡ ಕ್ರಮವಾಗಿ 30ಕ್ಕೆ4 ಮತ್ತು 38ಕ್ಕೆ 3 ವಿಕೆಟ್ ಕಬಳಿಸಿದರು. ಸಾಧಾರಣ ಗುರಿ ಬೆನ್ನತ್ತಿದ ಆರ್‌ವಿ ಶಾಲೆ 30 ಓವರ್‌ಗಳಲ್ಲಿ ಜಯ ಸಾಧಿಸಿತು. ಮೋನಿಷ್ ಕಾರ್ತಿಕ್ ಅಜೇಯ 49 ರನ್ ಗಳಿಸಿದರೆ. ನಿಖಿಲ್ ಅಜೇಯ 34 ರನ್ ಕಲೆ ಹಾಕಿದರು. ಶ್ರವಣ್ 52ಕ್ಕೆ 4 ವಿಕೆಟ್ ಗಳಿಸಿ ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.