ADVERTISEMENT

ಕ್ರಿಕೆಟ್: ಸಿಲ್ಕಿ ಟೌನ್, ಹನುಮಂತನಗರ ಸಿಸಿಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 20:20 IST
Last Updated 16 ಡಿಸೆಂಬರ್ 2020, 20:20 IST
ಕ್ರಿಕೆಟ್
ಕ್ರಿಕೆಟ್   

ಬೆಂಗಳೂರು: ಸಿಲ್ಕಿ ಟೌನ್ ಕ್ರಿಕೆಟ್ ಕ್ಲಬ್ ಮತ್ತು ಹನುಮಂತನಗರ ಕ್ರಿಕೆಟ್ ಕ್ಲಬ್ ತಂಡಗಳು ಬುಧವಾರ ನಡೆದ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದವು. ಸ್ಟ್ಯಾಂಡರ್ಡ್ ಕ್ರಿಕೆಟ್ ಕ್ಲಬ್ ಎದುರಿನ ಪಂದ್ಯದಲ್ಲಿ ಸಿಲ್ಕಿ ಟೌನ್ 120 ರನ್‌ಗಳಿಂದ ಗೆಲುವು ಸಾಧಿಸಿದರೆ, ಹ್ಯೂಟನ್ಸ್ ಕ್ರಿಕೆಟ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಹನುಮಂತನಗರ ಕ್ರಿಕೆಟ್ ಕ್ಲಬ್‌ ಎಂಟು ವಿಕೆಟ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಸಿಲ್ಕಿ ಟೌನ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 7ಕ್ಕೆ 191 (ಸೋಮಶೇಖರ್ 44, ಬಸಿತ್ ಅಲಿ 41; ಸಿದ್ಧಾರ್ಥ್ 23ಕ್ಕೆ4, ಮುರುಗನ್ 56ಕ್ಕೆ2); ಸ್ಟ್ಯಾಂಡರ್ಸ್ ಕ್ರಿಕೆಟ್‌ ಕ್ಲಬ್‌: 15.5 ಓವರ್‌ಗಳಲ್ಲಿ 71 (ಮುರುಗನ್ 40; ಆಸಿಫ್‌ 16ಕ್ಕೆ3, ಚಂದ್ರು 2ಕ್ಕೆ2). ಫಲಿತಾಂಶ: ಸಿಲ್ಕಿ ಟೌನ್ ತಂಡಕ್ಕೆ 120 ರನ್‌ಗಳ ಜಯ.

ಹ್ಯೂಟನ್ಸ್ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 8ಕ್ಕೆ 154 (ದುಶ್ಯಂತ್ 33; ಚಿರಂತ್ 22ಕ್ಕೆ2); ಹನುಮಂತನಗರ ಕ್ರಿಕೆಟ್ ಕ್ಲಬ್‌: 17.3 ಓವರ್‌ಗಳಲ್ಲಿ 2ಕ್ಕೆ 156 (ರಕ್ಷಿತ್ 31, ವಿಕ್ರಂ ಔಟಾಗದೆ 72). ಫಲಿತಾಂಶ: ಹನುಮಂತನಗರ ಕ್ಲಬ್‌ಗೆ 8 ವಿಕೆಟ್‌ಗಳ ಗೆಲುವು.

ADVERTISEMENT

ಫ್ರೆಂಡ್ಸ್‌ ಯೂನಿಯನ್ ಕ್ರಿಕೆಟರ್ಸ್‌ ಕೆಜಿಎಫ್‌: 17 ಓವರ್‌ಗಳಲ್ಲಿ 8ಕ್ಕೆ 151 (ಯತೀಶ್‌ ಕುಮಾರ್ 42; ರಾಜ್ ಕುಮಾರ್ 24ಕ್ಕೆ3, ಶಿವ ಕುಮಾರ್ 28ಕ್ಕೆ2); ಮಲ್ಲೇಶ್ವರಂ ಸ್ಪೋರ್ಟ್ಸ್ ಕ್ಲಬ್‌: 17 ಓವರ್‌ಗಳಲ್ಲಿ 6ಕ್ಕೆ 128 (ಶೋಯೆಬ್‌ 69; ಸಂತೋಷ್ ಸಿಂಗ್ 32ಕ್ಕೆ2, ಪುನೀತ್ 18ಕ್ಕೆ2). ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್ ಕ್ರಿಕೆಟರ್ಸ್‌ಗೆ 23 ರನ್‌ಗಳ ಜಯ (ಪಂದ್ಯ ತಡವಾಗಿ ಆರಂಭಗೊಂಡ ಕಾರಣ 17 ಓವರ್‌ಗಳಿಗೆ ಸೀಮಿತ).

ಕ್ರೆಸೆಂಟ್ ಕ್ರಿಕೆಟ್ ಕ್ಲಬ್‌ (1): 19.3 ಓವರ್‌ಗಳಲ್ಲಿ 137 (ಆನಂದ್ ಗೌಡ 51; ಕುಮಾರ್ ಎಲ್‌.ಆರ್‌ 23ಕ್ಕೆ2, ಅದ್ವಿತ್ ಶೆಟ್ಟಿ 25ಕ್ಕೆ2, ವಿನಯ್ ಎಂ 29ಕ್ಕೆ2); ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (2): 15.5 ಓವರ್‌ಗಳಲ್ಲಿ 5ಕ್ಕೆ 141 (ರವಿಕುಮಾರ್ ಔಟಾಗದೆ 48, ಕುಮಾರ್ ಎಲ್‌.ಆರ್‌ 34; ಸುನಿಲ್ ಕಶ್ಯಪ್ 18ಕ್ಕೆ2, ಪವನ್ ಶಿರಡಿ 39ಕ್ಕೆ2). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ಗೆ 5 ವಿಕೆಟ್‌ಗಳ ಜಯ.

ಎಮಿನೆಂಟ್ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 9ಕ್ಕೆ 86 (ಹರ್ಷ ಓಜಾ 2ಕ್ಕೆ2, ಶಿವಕುಮಾರ್ 14ಕ್ಕೆ3, ನವನೀತ್‌ 12ಕ್ಕೆ2); ಜಯದೂರ್‌ ಕ್ರಿಕೆಟರ್ಸ್‌: 10.5 ಓವರ್‌ಗಳಲ್ಲಿ 5ಕ್ಕೆ 87 (ತೇಜಸ್ 39; ಆರುಷ್ 13ಕ್ಕೆ2). ಫಲಿತಾಂಶ: ಜಯದೂರ್‌ ಕ್ರಿಕೆಟರ್ಸ್‌ಗೆ 5 ವಿಕೆಟ್‌ಗಳ ಜಯ.

ಮರ್ಚಂಟ್ಸ್ ಕ್ರಿಕೆಟ್ ಕ್ಲಬ್‌ (1): 20 ಓವರ್‌ಗಳಲ್ಲಿ 5ಕ್ಕೆ 166 (ಯಶಸ್ ಔಟಾಗದೆ 86, ಸತೀಶ್ 38); ಫ್ರೆಂಡ್ಸ್ ಕ್ರಿಕೆಟ್ ಟೀಮ್: 18.4 ಓವರ್‌ಗಳಲ್ಲಿ 105 (ಆಸಿಫ್ 39; ಏವಂತ್ 19ಕ್ಕೆ3, ಯೋಗೇಶ್ 24ಕ್ಕೆ2, ಆದಿತ್ಯ 17ಕ್ಕೆ2). ಫಲಿತಾಂಶ: ಮರ್ಚಂಟ್ಸ್ ಕ್ರಿಕೆಟ್ ಕ್ಲಬ್‌ಗೆ 61 ರನ್‌ಗಳ ಗೆಲುವು.

ಬೆಂಗಳೂರು ಸ್ಟಾರ್ ಕ್ರಿಕೆಟ್ ಅಸೋಸಿಯೇಷನ್: 20 ಓವರ್‌ಗಳಲ್ಲಿ 5ಕ್ಕೆ 188 (ರಾಹುಲ್ ಆರ್‌ ಔಟಾಗದೆ 53; ಶೇಖರ್ 22ಕ್ಕೆ2); ಗ್ಯಾರಿ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 5ಕ್ಕೆ 125 (ನಿಶಾಂತ್ 37, ಅಖಿಲೇಶ್ 2; ಧೀಮಂತ್‌ ರಾಜ್ 24ಕ್ಕೆ2). ಫಲಿತಾಂಶ: ಬೆಂಗಳೂರು ಸ್ಟಾರ್ ಕ್ರಿಕೆಟ್ ಅಸೋಸಿಯೇಷನ್‌ಗೆ 64 ರನ್‌ಗಳ ಜಯ.

ಬ್ಲೇಜ್ ಕ್ರಿಕೆಟ್ ಕ್ಲಬ್ ಹೊಸಕೋಟೆ: 20 ಓವರ್‌ಗಳಲ್ಲಿ 7ಕ್ಕೆ 112 (ದೀಪಕ್ ವಿ 48; ತೇಜಸ್ ಅಂಗಡಿ 34ಕ್ಕೆ2, ನವೀನ್ 15ಕ್ಕೆ2); ಫ್ರೆಂಡ್ಸ್‌ ಯೂನಿಯನ್ ಕ್ರಿಕೆಟ್ ಕ್ಲಬ್‌: 16.5 ಓವರ್‌ಗಳಲ್ಲಿ 4ಕ್ಕೆ 113 (ರೋಹನ್ ಔಟಾಗದೆ 37). ಫಲಿತಾಂಶ: ಫ್ರೆಂಡ್ಸ್‌ ಯೂನಿಯನ್‌ಗೆ 6 ವಿಕೆಟ್‌ಗಳ ಗೆಲುವು.

ಯಂಗ್ ಲಯನ್ಸ್‌ ಕ್ಲಬ್‌: 18 ಓವರ್‌ಗಳಲ್ಲಿ 8ಕ್ಕೆ 158 (ಪ್ರಜ್ವಲ್ 35, ಶರೀಫ್ 30; ಶ್ರೀಹರಿ 32ಕ್ಕೆ2, ಚಂದ್ರಶೇಖರ್ 29ಕ್ಕೆ4); ಶೇಷಾದ್ರಿಪುರ ಕಾಲೇಜು: 18 ಓವರ್‌ಗಳಲ್ಲಿ 9ಕ್ಕೆ 103 (ಶ್ರೀಹರಿ 65; ಜಯಸೂರ್ಯ 16ಕ್ಕೆ3). ಫಲಿತಾಂಶ: ಯಂಗ್ ಲಯನ್ಸ್‌ ಕ್ಲಬ್‌ಗೆ 55 ರನ್‌ಗಳ ಜಯ.

ಡಾಲ್ಫಿನ್ಸ್‌ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 126 (ತರುಣ್ 31, ಆದರ್ಶ್ 31; ಆದಿತ್ಯ 24ಕ್ಕೆ3, ವೈಭವ್ 14ಕ್ಕೆ2); ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್‌: 19.2 ಓವರ್‌ಗಳಲ್ಲಿ 8ಕ್ಕೆ 130 (ಜೀತು 28, ವೈಭವ್ ಔಟಾಗದೆ 26; ಸುದೀಪ್ 18ಕ್ಕೆ2, ಸಿದ್ಧಿಲ್ 36ಕ್ಕೆ4, ಶಾಹಿದ್ 12ಕ್ಕೆ2). ಫಲಿತಾಂಶ:ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್‌ಗೆ 2 ವಿಕೆಟ್‌ಗಳ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.