ADVERTISEMENT

ತನ್ನ ಬೌಲಿಂಗ್‌ಗೆ ತಾನೇ ವೀಕ್ಷಕ ವಿವರಣೆ ನೀಡಿದ ಕುಲದೀಪ್‌ ಯಾದವ್‌

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 8:41 IST
Last Updated 7 ಅಕ್ಟೋಬರ್ 2018, 8:41 IST
   

ಬೆಂಗಳೂರು: ಕ್ರೀಡಾಪಟುವೊಬ್ಬತನ್ನ ಆಟಕ್ಕೆ ತಾನೇ ವೀಕ್ಷಕ ವಿವರಣೆ ನೀಡಿದರೆ ಹೇಗಿರುತ್ತದೆ?
–ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿಮಿಂಚಿದ್ದ ಕುಲದೀಪ್‌ ಯಾದವ್‌, ಅಂತಹ ಪ್ರಯತ್ನ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದು ವಿಕೆಟ್‌ ಪಡೆದ ಖುಷಿಯಲ್ಲಿದ್ದ ಯಾದವ್‌, ಹೋಟೆಲ್‌ ಕೊಠಡಿಯಲ್ಲಿ ಕುಳಿತು ಈ ರೀತಿ ಮಾಡಿದ್ದಾರೆ.ಲ್ಯಾಪ್‌ಟಾಪ್‌ನಲ್ಲಿ ಪಂದ್ಯದ ಹೈಲೈಟ್ಸ್‌ಗಳನ್ನು ವೀಕ್ಷಿಸುತ್ತಿದ್ದ ಯಾದವ್‌, ಪಂದ್ಯದಲ್ಲಿ ತಾವು ಬೌಲಿಂಗ್ ಮಾಡಿದ ದೃಶ್ಯ ಪ್ರಸಾರವಾದ ಸಂದರ್ಭದಲ್ಲಿವೀಕ್ಷಕ ವಿವರಣೆ ನೀಡಿದ್ದಾರೆ.

ಈ ವಿಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ.

ADVERTISEMENT

ಪಂದ್ಯವನ್ನು ಭಾರತ ಇನಿಂಗ್ಸ್‌ ಹಾಗೂ 272 ರನ್‌ಗಳದಾಖಲೆಯ ಅಂತರರದಿಂದ ಗೆದ್ದುಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 1 ವಿಕೆಟ್‌ ಪಡೆದಿದ್ದ ಯಾದವ್‌ ಎರಡನೇ ಇನಿಂಗ್ಸ್‌ನಲ್ಲಿ 57 ರನ್‌ ನೀಡಿ ಐದು ವಿಕೆಟ್‌ ಉರುಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.