ADVERTISEMENT

ಲೆಜೆಂಡ್ಸ್ ಪ್ರೊ ಟಿ20 ಲೀಗ್ ವೇಳಾಪಟ್ಟಿ ನಿಗದಿ: ಯಾವೆಲ್ಲಾ ಆಟಗಾರರು ಇರಲಿದ್ದಾರೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2025, 5:16 IST
Last Updated 26 ನವೆಂಬರ್ 2025, 5:16 IST
<div class="paragraphs"><p>ಲೆಜೆಂಡ್ಸ್ ಪ್ರೊ ಟಿ20 ಲೀಗ್</p></div>

ಲೆಜೆಂಡ್ಸ್ ಪ್ರೊ ಟಿ20 ಲೀಗ್

   

ಚಿತ್ರ: @iiimyogesh

ಗೋವಾ: ಲೆಜೆಂಡ್ಸ್ ಪ್ರೊ ಟಿ20 ಲೀಗ್ ಮೊದಲ ಆವೃತ್ತಿ 2026ರ ಆರಂಭದಲ್ಲಿ ( ಜನವರಿ 26ರಿಂದ ಫೆಬ್ರವರಿ 4ರವರೆಗೆ) ಗೋವಾದಲ್ಲಿ ನಡೆಯಲಿದೆ. 90 ಜನ ದಿಗ್ಗಜ ಆಟಗಾರರನ್ನು ಒಳಗೊಂಡ 6 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗಹಿಸಲಿವೆ.

ADVERTISEMENT

ಈ ಟೂರ್ನಮೆಂಟ್ ವೆರ್ನಾದಲ್ಲಿ ಹೊಸದಾಗಿ ಉದ್ಘಾಟನೆಯಾಗಿರುವ 1919 ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಲೆಜೆಂಡ್ಸ್ ಪ್ರೊ ಟಿ20 ಲೀಗ್ ವಿಶ್ವ ಕ್ರಿಕೆಟ್‌ನಲ್ಲಿ ಹರ್ಭಜನ್ ಸಿಂಗ್, ಶಿಖರ್ ಧವನ್, ಮೈಕಲ್ ಕ್ಲಾರ್ಕ್, ಡೇಲ್ ಸ್ಟೈನ್, ಶೇನ್ ವಾಟ್ಸನ್‌ರಂತಹ ಅತ್ಯುತ್ತಮ ಹಿರಿಯ ಆಟಗಾರರನ್ನು ಒಳಗೊಂಡಿದೆ.

ಲೀಗ್ ಆಯುಕ್ತರಾಗಿ ನೇಮಕಗೊಂಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ‘ಕ್ರಿಕೆಟ್‌ನ ಅತಿದೊಡ್ಡ ನೆಲೆಗಳಲ್ಲಿ ಒಂದಾಗಿರುವ ಭಾರತ ನನಗೆ ವಿಶೇಷ ಸ್ಥಾನ ನೀಡಿದೆ. ಅಭಿಮಾನಿಗಳ ಉತ್ಸಾಹದ ಜೊತೆಗೆ ಕೆಲವು ಹಳೆಯ ಸ್ನೇಹಿತರ ಜೊತೆಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಖಷಿಯಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.