ADVERTISEMENT

ಆರ್‌ಸಿಬಿ ಖರೀದಿ: ಬಿಡ್‌ ರೇಸ್‌ನಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 21:08 IST
Last Updated 7 ಫೆಬ್ರುವರಿ 2026, 21:08 IST
<div class="paragraphs"><p>&nbsp;ಐಪಿಎಲ್ ಟ್ರೋಫಿಯೊಂದಿಗೆ ಆರ್‌ಸಿಬಿ ತಂಡ&nbsp;</p></div>

 ಐಪಿಎಲ್ ಟ್ರೋಫಿಯೊಂದಿಗೆ ಆರ್‌ಸಿಬಿ ತಂಡ 

   

ಬೆಂಗಳೂರು: ಐಪಿಎಲ್‌ ಫ್ರಾಂಚೈಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರ್ಯಾಂಚೈಸಿ ಖರೀದಿಸಲು ಸೀರಂ ಇನ್‌ಸ್ಟಿಟ್ಯೂಟ್‌ನ ಅದಾರ್ ‍ಪೂನಾವಾಲಾ ಇತ್ತೀಚೆಗೆ ಬಿಡ್‌ ಸಲ್ಲಿಸಿ ಪೈಪೋಟಿಗೆ ಕಾವು ಏರಿಸಿದ್ದರು. ಮ್ಯಾಂಚೆಸ್ಟರ್ ಯುನೈಟೆಡ್‌ ಸಹ ಮಾಲೀಕತ್ವ ಹೊಂದಿರುವ ಗ್ಲೇಝರ್ಸ್, ಲಸಿಕೆ ಉದ್ಯಮಿಗಿಂತ ಹೆಚ್ಚಿನ ಮೊತ್ತದ ಬಿಡ್‌ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.

ಇಂಗ್ಲೆಂಡ್ ಮೂಲದ ಕೆಲವು ಪತ್ರಿಕೆ ಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ಗ್ಲೇಝರ್ಸ್‌ ಕಂಪನಿಯು ಸುಮಾರು ₹16,300 ಕೋಟಿ ಮೊತ್ತಕ್ಕೆ ಬೆಂಗಳೂರು ಮೂಲದ ಫ್ರಾಂಚೈಸಿಯ ಖರೀದಿಗೆ ಮುಂದಾಗಿದೆ. ಇದು ಪೂನಾವಾಲಾ ಅವರು ಬಿಡ್‌ನಲ್ಲಿ ನಮೂದಿಸಿರುವ ಮೊತ್ತಕ್ಕಿಂತ ಹೆಚ್ಚು.

ADVERTISEMENT

ಗುರುವಾರವಷ್ಟೇ ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಆಗಿತ್ತು. ಆ ಮೂಲಕ ಐಪಿಎಲ್‌, ಡಬ್ಲ್ಯುಪಿಎಲ್‌ ಎರಡರಲ್ಲೂ ಆರ್‌ಸಿಬಿ ಏಕಕಾಲದಲ್ಲಿ ಚಾಂಪಿಯನ್ ಆಗಿದೆ.

2021ರಲ್ಲಿ ಗುಜರಾತ್ ಟೈಟನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್‌ ತಂಡಗಳ ಮಾಲೀಕತ್ವಕ್ಕೆ ನಡೆದ ಬಿಡ್‌ ಸಮರದಲ್ಲಿ ಗ್ಲೇಝರ್ಸ್‌ ಹಿನ್ನಡೆ ಕಂಡಿತ್ತು. ಈ ಬಾರಿ ತಂಡವೊಂದರ ಮಾಲೀಕತ್ವಕ್ಕೆ ಗಂಭೀರ ಪ್ರಯತ್ನ ನಡೆಸಿದೆ.

ಆರ್‌ಸಿಬಿಯ ಐಪಿಎಲ್ ಮತ್ತು ಡಬ್ಲ್ಯುಪಿಎಲ್‌ ತಂಡಗಳ ಒಡೆತನ ಹೊಂದಿರುವ ರಾಯಲ್‌ ಚಾಲೆಂಜರ್ಸ್‌ನ ಒಡೆತನ ಹೊಂದಿರುವ ಡಿಯಾಜಿಯೊ, ಫ್ರಾಂಚೈಸಿಯ ಮೌಲ್ಯವನ್ನು ಸುಮಾರು18,115 ಕೋಟಿ ಎಂದು ಅಂದಾಜು ಮಾಡಿದೆ. ಬಿಡ್‌ಗಳ ಮೌಲ್ಯಮಾಪನ ನಡೆಸಿ ಮಾರ್ಚ್‌ 31ರೊಳಗೆ ವರದಿ ಸಲ್ಲಿಸಲು ಲಂಡನ್ ಮೂಲದ ಸಲಹಾ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.