ADVERTISEMENT

ಫಿಕ್ಸಿಂಗ್: ಯುಎಇ ಆಟಗಾರರಿಗೆ ನಿಷೇಧ ಶಿಕ್ಷೆ

ಪಿಟಿಐ
Published 1 ಜುಲೈ 2021, 14:30 IST
Last Updated 1 ಜುಲೈ 2021, 14:30 IST
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್   

ದುಬೈ: ಕ್ರಿಕೆಟ್ ಪಂದ್ಯದ ಫಿಕ್ಸಿಂಗ್ ಮತ್ತು ಬುಕ್ಕಿಯೊಂದಿಗಿನ ಸಂಪರ್ಕವಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್‌ ತಂಡದ ಇಬ್ಬರು ಆಟಗಾರರಿಗೆ ಎಂಟು ವರ್ಷಗಳ ನಿಷೇಧ ಶಿಕ್ಷೆವಿಧಿಸಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ ಟ್ರಿಬ್ಯುನಲ್ ಗುರುವಾರ ಈ ತೀರ್ಪು ಪ್ರಕಟಿಸಿದೆ.

ಆಟಗಾರರಾದ ಅಮಿರ್ ಹಯಾತ್ ಮತ್ತು ಅಷ್ಫಾಕ್ ಅಹಮದ್ ಅವರು ಬುಕ್ಕಿಯೊಂದಿಗೆ ಸಂಪರ್ಕವಿರುವುದಾಗಿ ಒಪ್ಪಿಕೊಂಡಿದ್ದಾರೆ. 2019ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಫಿಕ್ಸ್ ಮಾಡುವ ಹುನ್ನಾರವನ್ನೂ ಒಪ್ಪಿಕೊಂಡಿದ್ದಾರೆ. ಭಾರತ ಮೂಲದ ಬುಕ್ಕಿ ಸಂಪರ್ಕಿಸಿದ್ದಾಗಿ ತಿಳಿಸಿದ್ದಾರೆ.

ADVERTISEMENT

ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ಇವರಿಬ್ಬರು ಆಟಗಾರರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಇಬ್ಬರೂ ಆಟಗಾರರು ಪಾಕಿಸ್ತಾನ ಮೂಲದವರು.

‘ಅವರ ಮೇಲಿನ ನಿಷೇಧವು 2020ರ ಸೆಪ್ಟೆಂಬರ್ 13ರಿಂದ ಪೂರ್ವಾನ್ವಯವಾಗಲಿದೆ‘ ಎಂದು ಐಸಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.