ADVERTISEMENT

ಟೆಸ್ಟ್ | ಕೊಹ್ಲಿಯ ಶ್ರೇಷ್ಠ ರೇಟಿಂಗ್ ಪಾಯಿಂಟ್ ದಾಖಲೆ ಸರಿಗಟ್ಟಿದ ಲಾಬುಶೇನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2022, 8:05 IST
Last Updated 15 ಡಿಸೆಂಬರ್ 2022, 8:05 IST
ಮಾರ್ನಸ್‌ ಲಾಬುಶೇನ್‌
ಮಾರ್ನಸ್‌ ಲಾಬುಶೇನ್‌   

ಆಸ್ಟ್ರೇಲಿಯಾದ ಭರವಸೆಯ ಕ್ರಿಕೆಟಿಗ ಮಾರ್ನಸ್‌ ಲಾಬುಶೇನ್‌ ಅವರು ಐಸಿಸಿ ಟೆಸ್ಟ್‌ ಕ್ರಿಕೆಟ್‌ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಷ್ಟಲ್ಲದೆ, ರೇಟಿಂಗ್‌ ಪಾಯಿಂಟ್‌ ಗಳಿಕೆಯಲ್ಲಿ ವಿರಾಟ್‌ ಕೊಹ್ಲಿ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

ಐಸಿಸಿ ಈಚೆಗೆ ಬಿಡುಗಡೆ ಮಾಡಿರುವ ರ‍್ಯಾಂಕಿಂಗ್‌ ಪಟ್ಟಿಯ ಪ್ರಕಾರ, ಮಾರ್ನಸ್‌ ಖಾತೆಯಲ್ಲಿ ಇದೀಗ 937 ಪಾಯಿಂಟ್‌ಗಳಿವೆ. ವಿರಾಟ್‌ ಕೊಹ್ಲಿ 2018ರಲ್ಲಿ ಇಷ್ಟು ಪಾಯಿಂಟ್‌ ಗಳಿಸಿದ್ದರು. ಅದು ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗಳಿಸಿದ ಶ್ರೇಷ್ಠ ರೇಟಿಂಗ್ ಪಾಯಿಂಟ್‌ ಆಗಿದೆ.

ಕೇವಲ 52 ಇನಿಂಗ್ಸ್‌ಗಳಲ್ಲೇ3,041 ರನ್‌ ಗಳಿಸಿರುವ ಮಾರ್ನಸ್‌,ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ3 ಸಾವಿರ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಆಸ್ಟ್ರೇಲಿಯಾದ ದಂತಕತೆ ಡಾನ್‌ ಬ್ರಾಡ್‌ಮನ್‌ ಅವರು 23 ಪಂದ್ಯಗಳ 33 ಇನಿಂಗ್ಸ್‌ಗಳಲ್ಲೇ 3 ಸಾವಿರ ರನ್‌ ಗಳಿಸಿರುವುದು ಸದ್ಯ ದಾಖಲೆಯಾಗಿದೆ.

ADVERTISEMENT

30 ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದಿರುವಮಾರ್ನಸ್‌ ಈಗಾಗಲೇ 10 ಶತಕ, 2 ದ್ವಿಶತಕ ಮತ್ತು 13 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನ ಅಗ್ರ ಹತ್ತು ಬ್ಯಾಟರ್‌ಗಳು

ಆಟಗಾರ ದೇಶ ರೇಟಿಂಗ್ ಪಾಯಿಂಟ್
ಮಾರ್ನಸ್ ಲಾಬುಶೇನ್ ಆಸ್ಟ್ರೇಲಿಯಾ 937
ಸ್ಟೀವ್‌ ಸ್ಮಿತ್ ಆಸ್ಟ್ರೇಲಿಯಾ 875
ಬಾಬರ್ ಅಜಂ ಪಾಕಿಸ್ತಾನ
871
ಜೋ ರೂಟ್ ಇಂಗ್ಲೆಂಡ್‌
848
ರಿಷಭ್‌ ಪಂತ್ ಭಾರತ
801
ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್
786
ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ
774
ಉಸ್ಮಾನ್ ಖ್ವಾಜಾ ಆಸ್ಟ್ರೇಲಿಯಾ
749
ದಿಮುತ್ ಕರುಣಾರತ್ನೆ ಶ್ರೀಲಂಕಾ
748
ರೋಹಿತ್ ಶರ್ಮಾ ಭಾರತ
746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.