ವಿಕೆಟ್ ತೆಗೆದ ಸಂಭ್ರಮದಲ್ಲಿ ಆಸೀಸ್ ವೇಗಿ ಸ್ಟಾರ್ಕ್
ಚಿತ್ರ ಕೃಪೆ: @Visharad_KW22
ಬ್ರಿಸ್ಬೆನ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಹುನಿರೀಕ್ಷಿತ ಆ್ಯಷಸ್ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲಿಷ್ ಬ್ಯಾಟರ್‌ಗಳಿಗೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಕಾಡಿದರು. ಅಮೋಘ ಬೌಲಿಂಗ್ ದಾಳಿ ನಡೆಸಿದ ಅವರು, ಬೆನ್ ಡಕೆಟ್, ಓಲಿ ಪೋಪ್ ಹಾಗೂ ಹ್ಯಾರಿ ಬ್ರೂಕ್ ಅವರ ವಿಕೆಟ್ ಕಬಳಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಅವರ ವಿಕೆಟ್ ತೆಗೆದ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ‘ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗದ ಬೌಲರ್’ ಎಂಬ ಸಾಧನೆ ಮಾಡಿದರು. ಆ ಮೂಲಕ ಪಾಕಿಸ್ತಾನ ಮಾಜಿ ಆಟಗಾರ ವಾಸೀಂ ಅಕ್ರಮ್ ಅವರ ದಾಖಲೆ ಮುರಿದಿದ್ದಾರೆ.
ವಾಸೀಂ ಅಕ್ರಮ್ 414 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿ ಎಂಬ ಸಾಧನೆ ಮಾಡಿದ್ದರು. ಇಂದಿನ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಸ್ಟಾರ್ಕ್ ಅವರು ಈ ದಾಖಲೆ ಮುರಿದು 415 ವಿಕೆಟ್ ಪಡೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿಗಳು
ಮಿಚೆಲ್ ಸ್ಟಾರ್ಕ್–415* (ಆಸ್ಟ್ರೇಲಿಯಾ)
ವಾಸೀಂ ಅಕ್ರಮ್–414 (ಪಾಕಿಸ್ತಾನ)
ಚಾಮಿಂಡ ವಾಸ್ – 355 (ಶ್ರೀಲಂಕಾ)
ಟ್ರೆಂಟ್ ಬೋಲ್ಟ್ –317 (ನ್ಯೂಜಿಲೆಂಡ್)
ಜಹೀರ್ ಖಾನ್ – 311 (ಭಾರತ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.