
ನವದೆಹಲಿ: ಭಾರತ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಎಲ್ಲ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದರು.
2013ರಲ್ಲಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 26 ಏಕದಿನ ಪಂದ್ಯಗಳಲ್ಲಿ 26 ವಿಕೆಟ್, ಎಂಟು ಟಿ20 ಪಂದ್ಯಗಳಿಂದ ಆರು ವಿಕೆಟ್ ಗಳಿಸಿದ್ದಾರೆ. 2015ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿದ್ದ ಭಾರತ ತಂಡದಲ್ಲಿಯೂ ಅವರಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅವರು ‘ಡೆತ್ ಓವರ್’ ಪರಿಣತರಾಗಿ ಗುರುತಿಸಿಕೊಂಡಿದ್ದರು. ಅವರು ಕಿಂಗ್ಸ್ ಇಲೆವನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳಲ್ಲಿಯೂ ಆಡಿದ್ದರು.
‘ಕ್ರಿಕೆಟ್‌ನ ಎಲ್ಲ ಮಾದರಿಗಳಿಗೂ ವಿದಾಯ ಹೇಳುತ್ತಿದ್ದೇನೆ. ಹರಿಯಾಣ ತಂಡವನ್ನು ಪ್ರತಿನಿಧಿಸಿದ್ದೆ. ನಂತರ ಭಾರತ ತಂಡದ ಪೋಷಾಕು ಧರಿಸಿ ಆಡುವ ಅವಕಾಶ ದೊರೆಯಿತು. ಐಪಿಎಲ್ ಪಯಣವು ಬಹಳ ವಿಶೇಷವಾಗಿತ್ತು. ಹರಿಯಾಣ ಕ್ರಿಕೆಟ್ ಸಂಸ್ಥೆಗೆ ಧನ್ಯವಾದಗಳು. ಅನಿರುದ್ಧ ಸರ್ ಅವರು ನಿರಂತರ ಮಾರ್ಗದರ್ಶನ ನೀಡುತ್ತ ನನ್ನ ಆತ್ಮವಿಶ್ವಾಸ ಹೆಚ್ಚಿಸಿದವರು. ಬಿಸಿಸಿಐ, ಸ್ನೇಹಿತರು ಹಾಗೂ ಐಪಿಎಲ್ ಫ್ರ್ಯಾಂಚೈಸಿಗಳಿಗೆ ಆಭಾರಿಯಾಗಿರುವೆ’ ಎಂದು 37 ವರ್ಷದ ಮೋಹಿತ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.