ADVERTISEMENT

ಇಂಗ್ಲೆಂಡ್ ಕಳಪೆ ಬ್ಯಾಟಿಂಗ್‌: ಮಾರ್ಗನ್ ಅಸಮಾಧಾನ

ಪಿಟಿಐ
Published 22 ಜೂನ್ 2019, 20:00 IST
Last Updated 22 ಜೂನ್ 2019, 20:00 IST
ಇಯಾನ್ ಮಾರ್ಗನ್ ಔಟಾದಾಗ ಸಂಭ್ರಮಿಸಿದ ಲಂಕಾ ತಂಡದ ಆಟಗಾರು –ಎಎಫ್‌ಪಿ ಚಿತ್ರ
ಇಯಾನ್ ಮಾರ್ಗನ್ ಔಟಾದಾಗ ಸಂಭ್ರಮಿಸಿದ ಲಂಕಾ ತಂಡದ ಆಟಗಾರು –ಎಎಫ್‌ಪಿ ಚಿತ್ರ   

ಲೀಡ್ಸ್: ಶುಕ್ರವಾರ ಶ್ರೀಲಂಕಾ ತಂಡವು ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟುವಲ್ಲಿ ಇಂಗ್ಲೆಂಡ್ ವಿಫಲವಾಗಿತ್ತು. ಅದರಿಂದಾಗಿ ಸೋಲನುಭವಿಸಿತ್ತು.

ಸ್ಫೋಟಕ ಬ್ಯಾಟ್ಸ್‌ಮನ್‌ಗಳು ದಂಡು ಇರುವ ಇಂಗ್ಲೆಂಡ್ ತಂಡವು ಈ ರೀತಿ ಎಡವಿದ್ದು ನಾಯಕ ಇಯಾನ್ ಮಾರ್ಗನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

‘ಯಾವುದೇ ಮೊತ್ತವನ್ನು ಬೆನ್ನಟ್ಟುವಾಗ ಒಂದು ಉತ್ತಮ ಪಾಲುದಾರಿಕೆ ಆಟ ಮುಖ್ಯವಾಗುತ್ತದೆ. ಅಂತಹ ಒಂದು ಜೊತೆಯಾಟವಾಡುವಲ್ಲಿ ನಾವು ಬಹಳಷ್ಟು ಹಂತಗಳಲ್ಲಿ ಸಫಲರಾಗಲಿಲ್ಲ. ಅದು ಸೋಲಿಗೆ ಕಾರಣವಾಯಿತು. ನಮ್ಮಲ್ಲಿರುವ ಬ್ಯಾಟ್ಸ್‌ ಮನ್‌ಗಳು ಹೊಂದಾಣಿಕೆಯ ಆಟವಾಡ ಬೇಕಿತ್ತು’ ಎಂದು ಪಂದ್ಯದ ನಂತರ ಐಸಿಸಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನ ದಲ್ಲಿ ಮಾರ್ಗನ್ ಹೇಳಿದರು.

ADVERTISEMENT

ಶ್ರೀಲಂಕಾ ತಂಡವು 232 ರನ್‌ಗಳ ಗುರಿ ನೀಡಿತ್ತು. ಆದರೆ ಇಂಗ್ಲೆಂಡ್ ತಂಡವು ಜೋ ರೂಟ್ (52 ರನ್) ಮತ್ತು ಬೆನ್ ಸ್ಟೋಕ್ಸ್‌ (ಔಟಾಗದೆ 82) ಅವರ ಅರ್ಧಶತಕಗಳ ಹೊರತಾಗಿಯೂ20 ರನ್‌ಗಳಿಂದ ಸೋತಿತು. ನಾಲ್ಕು ವಿಕೆಟ್‌ಗಳನ್ನು ಗಳಿಸಿದ ಲಸಿತ್ ಮಾಲಿಂಗ್ ಲಂಕಾ ತಂಡದ ಗೆಲುವಿನ ರೂವಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.