
ಪಿಟಿಐ
ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ ಅವರು ಇಲ್ಲಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಶನಿವಾರ ಬ್ಯಾಟಿಂಗ್ ತಾಲೀಮು ನಡೆಸಿದ್ದಾರೆ.
ಮಾರ್ಚ್ 26ರಂದು ಐಪಿಎಲ್ ಆರಂಭವಾಗಲಿದ್ದು, ಅದರ ಸಿದ್ಧತೆಯ ಭಾಗವಾಗಿ ಧೋನಿ ಅವರು ಅಭ್ಯಾಸ ಆರಂಭಿಸಿದ್ದಾರೆಂದು ಹೇಳಲಾಗುತ್ತಿದೆ.
ಧೋನಿ ಅವರು ಪ್ಯಾಡ್ ಕಟ್ಟಿಕೊಂಡು ನೆಟ್‌ನಲ್ಲಿ ತಾಲೀಮು ನಡೆಸುತ್ತಿರುವ ವಿಡಿಯೊವನ್ನು ಜೆಎಸ್‌ಸಿಎ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ತಾಲೀಮು ವೇಳೆ, ಧೋನಿ ಅವರು ಭಾರತ ತಂಡದ ಮಾಜಿ ಆಟಗಾರ ಸೌರಭ್ ತಿವಾರಿ ಅವರೊಂದಿಗೆ ಚರ್ಚಿಸಿರುವುದೂ ವಿಡಿಯೊದಲ್ಲಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 2020ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಈ ದಿಗ್ಗಜ ಕ್ರಿಕೆಟಿಗ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.