ADVERTISEMENT

IPL 2026 | ಮುಂದಿನ ವರ್ಷವೂ ಚೆನ್ನೈ ಪರ ಆಡಲಿರುವ ಧೋನಿ: ಸಿಎಸ್‌ಕೆ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2025, 14:21 IST
Last Updated 7 ನವೆಂಬರ್ 2025, 14:21 IST
   

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌(ಸಿಎಸ್‌ಕೆ) ತಂಡದ ತಾರಾ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರು 2026ರಲ್ಲೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ(ಐಪಿಎಲ್‌) ಸಿಎಸ್‌ಕೆ ತಂಡದಲ್ಲೇ ಮುಂದುವರೆಯಲಿದ್ದಾರೆ ಎಂದು ಮ್ಯಾನೇಜ್‌ಮೆಂಟ್‌ ಸ್ಪಷ್ಟಪಡಿಸಿರುವುದಾಗಿ ಕ್ರಿಕ್‌ಬಝ್‌ ವರದಿ ಮಾಡಿದೆ.

ಮುಂದಿನ ಐಪಿಎಲ್‌ಗಾಗಿ 44 ವರ್ಷದ ಧೋನಿ ಅವರನ್ನು ಸಂಜು ಸ್ಯಾಮ್ಸನ್‌ ಜೊತೆ ಟ್ರೇಡ್‌ ಮಾಡಲಾಗುತ್ತದೆ ಎನ್ನುವ ವಂದತಿಗಳು ಹರಿದಾಡುತ್ತಿದ್ದವು.

ಐಪಿಎಲ್‌ ಮುಂದಿನ ಆವೃತ್ತಿಗೆ ಧೋನಿ ಅವರು ಲಭ್ಯವಿರುವುದಾಗಿ ತಿಳಿಸಿದ್ದಾರೆ ಎಂದು ಸಿಎಸ್‌ಕೆ ತಂಡದ ಸಿಇಒ ಕಾಶಿ ವಿಶ್ವನಾಥ ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಋತುರಾಜ್‌ ಗಾಯಕವಾಡ್‌ ಅವರು ಸಿಎಸ್‌ಕೆ ತಂಡವನ್ನು ಮುನ್ನೆಡೆಸಿದ್ದರು. ಟೂರ್ನಿಯ ಮಧ್ಯದಲ್ಲಿ ಅವರು ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರಿಂದ, ಉಳಿದ ಪಂದ್ಯಗಳಿಗೆ ಧೋನಿಯೇ ನಾಯಕರಾಗಿದ್ದರು. ಸಿಎಸ್‌ಕೆ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.

2008ರಿಂದಲೂ ಸಿಎಸ್‌ಕೆ ಭಾಗವಾಗಿರುವ ಧೋನಿ, ತಂಡದ ಪರವಾಗಿ 248 ಪಂದ್ಯಗಳನ್ನು ಆಡಿದ್ದಾರೆ. ನಾಯಕರಾಗಿ ಐದು ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.