ADVERTISEMENT

NZ vs PAK: 11ನೇ ಕ್ರಮಾಂಕದಲ್ಲಿ ಅರ್ಧಶತಕ; ದಾಖಲೆ ಬರೆದ ಪಾಕಿಸ್ತಾನ ಬ್ಯಾಟರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2025, 15:44 IST
Last Updated 3 ಏಪ್ರಿಲ್ 2025, 15:44 IST
<div class="paragraphs"><p>ಪಾಕಿಸ್ತಾನ ಬ್ಯಾಟರ್‌</p></div>

ಪಾಕಿಸ್ತಾನ ಬ್ಯಾಟರ್‌

   

ಚಿತ್ರ: X, @TheRealPCB

ಹ್ಯಾಮಿಲ್ಟನ್‌: ನ್ಯೂಜಿಲೆಂಡ್‌ ಎದುರಿನ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಪಾಕಿಸ್ತಾನದ ನಸೀಮ್‌ ಶಾ, ವಿಶೇಷ ದಾಖಲೆ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಂಡರು.

ADVERTISEMENT

ಇಲ್ಲಿನ ಸೆಡಾನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 292 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ 41.2 ಓವರ್‌ಗಳಲ್ಲಿ 208 ರನ್‌ ಗಳಿಸುವಷ್ಟರಲ್ಲೇ ಆಲೌಟ್ ಆಯಿತು.

ಪಾಕ್‌ ಪಡೆ 28.2 ಓವರ್‌ಗಳಲ್ಲಿ 114 ರನ್‌ಗೆ 8 ವಿಕೆಟ್‌ ಕಳೆದುಕೊಂಡಿತ್ತು. ಕೆಳ ಕ್ರಮಾಂಕದ ಬ್ಯಾಟರ್‌ ಹ್ಯಾರಿಸ್‌ ರೌಫ್‌ ಗಾಯಗೊಂಡು (ರಿಟರ್ಡ್‌ ಹರ್ಟ್‌) ಪೆವಿಲಿಯನ್‌ ಸೇರಿಕೊಂಡಿದ್ದರು. ಈ ಹಂತದಲ್ಲಿ ಕ್ರೀಸ್‌ಗಿಳಿದ ಶಾ, 44 ಎಸೆತಗಳಲ್ಲಿ 51 ರನ್‌ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ತಲಾ ನಾಲ್ಕು ಬೌಂಡರಿ ಮತ್ತು ಸಿಕ್ಸರ್‌ಗಳಿದ್ದವು.

ಇದರೊಂದಿಗೆ, ಏಕದಿನ ಕ್ರಿಕೆಟ್‌ನಲ್ಲಿ 11ನೇ ಕ್ರಮಾಂಕದಲ್ಲಿ ಆಡಿ ಅರ್ಧಶತಕದ ಸಿಡಿಸಿದ ಎರಡನೇ ಬ್ಯಾಟರ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಪಾಕಿಸ್ತಾನದವರೇ ಆದ ಮೊಹಮ್ಮದ್‌ ಆಮೀರ್‌ 2016ರಲ್ಲಿ ಇಂಗ್ಲೆಂಡ್‌ ವಿರುದ್ಧ 58 ರನ್‌ ಗಳಿಸಿದ್ದು, ಏಕದಿನ ಕ್ರಿಕೆಟ್‌ನ ಪಂದ್ಯವೊಂದರಲ್ಲಿ ಕೊನೇ ಕ್ರಮಾಂಕದ ಬ್ಯಾಟರ್‌ ಗಳಿಸಿದ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್‌ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ಗೆ 444 ರನ್‌ ಗಳಿಸಿತ್ತು. ಪಾಕ್‌ ಪಡೆ 275 ರನ್‌ಗೆ ಆಲೌಟ್‌ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.