ADVERTISEMENT

‘ಸೈನಿಗೆ ಉಜ್ವಲ ಭವಿಷ್ಯ ಇದೆ’

ಪಿಟಿಐ
Published 4 ಆಗಸ್ಟ್ 2019, 19:46 IST
Last Updated 4 ಆಗಸ್ಟ್ 2019, 19:46 IST
   

ಲಾಡೆರ್‌ಹಿಲ್, ಅಮೆರಿಕ (ಪಿಟಿಐ): ಮಧ್ಯಮವೇಗಿ ನವದೀಪ್ ಸೈನಿ ಶನಿವಾರ ತಮ್ಮ ಪದಾರ್ಪಣೆಯ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯದಲ್ಲಿಯೇ ಪಂದ್ಯಶ್ರೇಷ್ಠ ಗೌರವವನ್ನೂ ಗಳಿಸಿದರು.

ವೆಸ್ಟ್ ಇಂಡೀಸ್ ತಂಡದ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದ್ದ ಬಲಗೈ ಮಧ್ಯಮವೇಗಿ ಭಾರತದ ಗೆಲುವಿಗೆ ಮುನ್ನುಡಿ ಬರೆದಿದ್ದರು. ಕೇವಲ 95 ರನ್‌ಗಳಿಗೆ ವಿಂಡೀಸ್ ಆಲೌಟ್ ಆಗಿತ್ತು. ಗುರಿ ಬೆನ್ನತ್ತಿದ್ದ ಭಾರತ ತಂಡವು 17.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 98 ರನ್ ಗಳಿಸಿತ್ತು. ಹರಿಯಾಣದ 26 ವರ್ಷದ ಸೈನಿ ಈಗ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ದೆಹಲಿ ರಣಜಿ ತಂಡದಲ್ಲಿ ಆಡುವ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮನವನ್ನೂ ಗೆದ್ದಿದ್ದಾರೆ.

‘ಸೈನಿ ‍ಪ್ರತಿಭಾವಂತ ಬೌಲರ್. ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಸಮರ್ಥರು. ಫಿಟ್‌ನೆಸ್‌ ಕೂಡ ಚೆನ್ನಾಗಿದೆ. ಸಾಧನೆಯ ಅಪಾರ ಹಸಿವು ಅವರಲ್ಲಿದೆ’ ಎಂದು ಕೊಹ್ಲಿ ಶ್ಲಾಘಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.