ADVERTISEMENT

ಟಿ20 ಕ್ರಿಕೆಟ್‌: ವಿಂಡೀಸ್ ವಿರುದ್ಧ ಸರಣಿ ಗೆದ್ದ ನೇಪಾಳ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 14:29 IST
Last Updated 30 ಸೆಪ್ಟೆಂಬರ್ 2025, 14:29 IST
<div class="paragraphs"><p>ಕ್ರಿಕೆಟ್</p></div>

ಕ್ರಿಕೆಟ್

   

ಶಾರ್ಜಾ: ನೇಪಾಳ ತಂಡವು ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಸೋಮವಾರ ವೆಸ್ಟ್‌ ಇಂಡೀಸ್‌ ತಂಡಕ್ಕೆ 90 ರನ್‌ಗಳ ಆಘಾತಕಾರಿ ಸೋಲುಣಿಸಿತು. ಇನ್ನೂ ಒಂದು ಪಂದ್ಯ ಉಳಿದಿರುವಂತೆ ಸರಣಿ ಗೆದ್ದುಕೊಂಡಿತು.

ನೇಪಾಳ ಶನಿವಾರ ನಡೆದ ಮೊದಲ ಏಕದಿನ ಪಂದ್ಯವನ್ನು 19 ರನ್‌ಗಳಿಂದ ಗೆದ್ದುಕೊಂಡಿತ್ತು. ಇದು ನೇಪಾಳಕ್ಕೆ ಐಸಿಸಿ ಪೂರ್ಣಪ್ರಮಾಣದ ಸದಸ್ಯ ತಂಡದ ವಿರುದ್ಧ ಮೊದಲ ಗೆಲುವು ಆಗಿತ್ತು. ಸೋಮವಾರದ ಗೆಲುವು ಮೊದಲಿನದ್ದಕ್ಕಿಂತ ಸ್ಫೂರ್ತಿಯುತವಾಗಿತ್ತು.

ADVERTISEMENT

ಮೂರನೇ ಟಿ20 ಮಂಗಳವಾರ ನಡೆಯಲಿದೆ.

ನೇಪಾಳ ತಂಡವು ಆಸಿಫ್‌ ಶೇಖ್ ಮತ್ತು ಸಂದೀಪ್ ಜೊರಾ ಅವರ ಅರ್ಧಶತಕಗಳ ನೆರವಿನಿಂದ 6 ವಿಕೆಟ್‌ಗೆ 173 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವೆಸ್ಟ್‌ ಇಂಡೀಸ್ 17.1 ಓವರುಗಳಲ್ಲಿ 83 ರನ್‌ಗಳಿಗೆ ಆಲೌಟಾಯಿತು. ವೇಗದ ಬೌಲರ್ ಆದಿಲ್ ಆಲಂ ಪರಿಣಾಮಕಾರಿ ದಾಳಿಯಲ್ಲಿ 24 ರನ್ನಿಗೆ 4 ವಿಕೆಟ್ ಪಡೆದರು.

ಪ್ರಮುಖ ಆಟಗಾರರಿಲ್ಲದೇ ಆಡಿದ ವೆಸ್ಟ್‌ ಇಂಡೀಸ್ ಈ ಸರಣಿಯಲ್ಲಿ, ಝೀಶನ್ ಮೊಟಾರ ಮೂಲಕ ಐದನೇ ಆಟಗಾರನಿಗೆ ಪದಾರ್ಪಣೆ ಅವಕಾಶ ನೀಡಿತು.

ಒಂದು ಹಂತದಲ್ಲಿ ನೇಪಾಳ 43 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತ್ತು.  ನಾಯಕ ಅಖಿಲ್ ಹುಸೇನ್ 2 ವಿಕೆಟ್‌ ಪಡೆದಿದ್ದರು. ಆದರೆ ಆರಂಭ ಆಟಗಾರ ಆಸಿಫ್ (68, 47ಎ) ಮತ್ತು ಸಂದೀಪ್ (63, 39ಎ, 6x5) 11 ಓವರುಗಳಲ್ಲಿ 100 ರನ್ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.