ADVERTISEMENT

SL vs NZ: ಫಲ ನೀಡದ ಮಹೀಷ ತೀಕ್ಷಣ ಹ್ಯಾಟ್ರಿಕ್; ನ್ಯೂಜಿಲೆಂಡ್‌ಗೆ ಜಯ, ಸರಣಿ ವಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 12:25 IST
Last Updated 8 ಜನವರಿ 2025, 12:25 IST
<div class="paragraphs"><p>ನ್ಯೂಜಿಲೆಂಡ್</p></div>

ನ್ಯೂಜಿಲೆಂಡ್

   

(ಚಿತ್ರ ಕೃಪೆ: X@ICC)

ಹ್ಯಾಮಿಲ್ಟನ್‌: ಶ್ರೀಲಂಕಾದ ಅಗ್ರ ಬ್ಯಾಟಿಂಗ್ ಸರದಿ ಧ್ವಂಸ ಮಾಡಿದ ಆತಿಥೇಯ ನ್ಯೂಜಿಲೆಂಡ್‌ ತಂಡ, ಮಳೆಯಿಂದ ಮೊಟಕುಗೊಂಡ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 113 ರನ್‌ಗಳಿಂದ ಸೋಲಿಸಿತು. ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಉಳಿದಿರುವಂತೆ 2–0ಯಿಂದ ಕೈವಶ ಮಾಡಿಕೊಂಡಿತು.

ADVERTISEMENT

ಶ್ರೀಲಂಕಾದ ಸ್ಪಿನ್ನರ್ ಮಹೀಷ ತೀಕ್ಷಣ ಹ್ಯಾಟ್ರಿಕ್ ಪಡೆದರೂ, ಆತಿಥೇಯ ತಂಡ 37 ಓವರುಗಳಿಗೆ ಸೀಮಿತಗೊಂಡ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 255 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ರಚಿನ್ ರವೀಂದ್ರ (79) ಮತ್ತು ಮಾರ್ಕ್‌ ಚಾಪ್ಮನ್ (62) ಅರ್ಧ ಶತಕಗಳನ್ನು ದಾಖಲಿಸಿದರು. ನಂತರ ಲಂಕಾ ತಂಡವನ್ನು 30.2 ಓವರುಗಳಲ್ಲಿ 142 ರನ್‌ಗಳಿಗೆ ಉರುಳಿಸಿತು. ಕಮಿಂದು ಮೆಂಡಿಸ್‌  (64) ಉಳಿದವರು ಯಾರೂ ಹೋರಾಟ ತೋರಲಿಲ್ಲ.

ವೆಲಿಂಗ್ಟನ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ನ್ಯೂಜಿಲೆಂಡ್‌ 9 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಮೊದಲ ಪಂದ್ಯದಲ್ಲೂ ಲಂಕಾದ ಬ್ಯಾಟಿಂಗ್ ಕಳಪೆಯಾಗಿತ್ತು. ಅಂತಿಮ ಪಂದ್ಯ ಶನಿವಾರ ಆಕ್ಲೆಂಡ್‌ನಲ್ಲಿ ನಡೆಯಲಿದೆ.

ತಂಡಕ್ಕೆ ಪುನರಾಮಗನ ಮಾಡಿದ ಆಫ್‌ ಸ್ಪಿನ್ನರ್ ಮಹೀಷ ತೀಕ್ಷಣ 44 ರನ್ನಿಗೆ 4 ವಿಕೆಟ್‌ಗಳನ್ನು ಪಡೆದು ಮಿಂಚಿದರು. 35ನೇ ಓವರಿನ ಕೊನೆಯ ಎರಡು ಎಸೆತಗಳಲ್ಲಿ ಅವರು ಕ್ರಮವಾಗಿ ಮಿಚೆಲ್ ಸ್ಯಾಂಟ್ನರ್‌ ಮತ್ತು ನಥಾನ್ ಸ್ಮಿತ್ ಅವರ ವಿಕೆಟ್‌ಗಳನ್ನು ಪಡೆದರು. ಕೊನೆಯ ಓವರಿನ ಮೊದಲ ಎಸೆತದಲ್ಲಿ ಮ್ಯಾಟ್‌ ಹೆನ್ರಿ ಅವರ ವಿಕೆಟ್‌ ಗಳಿಸಿ ಹ್ಯಾಟ್ರಿಕ್ ಪೂರೈಸಿದರು. ಮೂವರೂ ಬ್ಯಾಟರ್‌ಗಳು ಹೊಡೆತಗಳ ಯತ್ನದಲ್ಲಿ ಕ್ಯಾಚಿತ್ತರು.

ಸ್ಕೋರುಗಳು:

ನ್ಯೂಜಿಲೆಂಡ್‌: 37 ಓವರುಗಳಲ್ಲಿ 9 ವಿಕೆಟ್‌ಗೆ 255 (ರಚಿನ್ ರವೀಂದ್ರ 79, ಮಾರ್ಕ್ ಚಾಪ್ಮನ್ 62, ಡೇರಿಲ್ ಮಿಚೆಲ್ 38; ಮಹೀಷ ತೀಕ್ಷ್ಮಣ 44ಕ್ಕೆ4, ವನೀಂದು ಹಸರಂಗ 39ಕ್ಕೆ2); ಶ್ರೀಲಂಕಾ: 30.2 ಓವರುಗಳಲ್ಲಿ 142 (ಕಮಿಂದು ಮೆಂಡಿಸ್‌ 64; ಮ್ಯಾಟ್‌ ಹೆನ್ರಿ 19ಕ್ಕೆ1, ಜಾಕೋಬ್ ಡಫಿ 30ಕ್ಕೆ2, ವಿಲ್ ಓ ರೂರ್ಕಿ 31ಕ್ಕೆ3, ಮಿಚೆಲ್ ಸ್ಯಾಂಟ್ನರ್ 14ಕ್ಕೆ1). ಪಂದ್ಯದ ಆಟಗಾರ: ರಚಿನ್ ರವೀಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.