ADVERTISEMENT

ಟಿ–20 ಕ್ರಿಕೆಟ್‌: ಭಾರತದ ವಿರುದ್ಧ ಟಾಸ್‌ ಗೆದ್ದ ಕೀವಿಸ್‌ -ಬ್ಯಾಟಿಂಗ್‌ ಆಯ್ಕೆ 

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 6:00 IST
Last Updated 8 ಫೆಬ್ರುವರಿ 2019, 6:00 IST
ಚಿತ್ರ: ಬಿಸಿಸಿಐ ಟ್ವಿಟರ್‌
ಚಿತ್ರ: ಬಿಸಿಸಿಐ ಟ್ವಿಟರ್‌   

ಆಕ್ಲೆಂಡ್‌: ಇಲ್ಲಿನ ಈಡನ್ ಪಾರ್ಕ್‌ನಲ್ಲಿ ಶುಕ್ರವಾರ ನಡೆಯುತ್ತಿರುವ ಭಾರತದ ವಿರುದ್ಧದ ಎರಡನೇ ಟ್ವಿಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾರತ ತಂಡ ನ್ಯೂಜಿಲೆಂಡ್ ಎದುರಿನ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ತಿರುಗೇಟು ನೀಡುವ ಛಲದಲ್ಲಿದೆ.

ಮೊದಲ ಪಂದ್ಯದಲ್ಲಿ ಭಾರತ 80 ರನ್‌ಗಳಿಂದ ಸೋತಿತ್ತು. ಇದು, ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತದ ಈ ವರೆಗಿನ ಹೀನಾಯ ಸೋಲಾಗಿತ್ತು. ಪಂದ್ಯದಲ್ಲಿ ಭಾರತ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಂಡಿತ್ತು.

ADVERTISEMENT

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್‌, ರಿಷಭ್ ಪಂತ್‌, ದಿನೇಶ್ ಕಾರ್ತಿಕ್‌, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ಧೋನಿ, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಭುನವೇಶ್ವರ್ ಕುಮಾರ್‌, ಸಿದ್ಧಾರ್ಥ್‌ ಕೌಲ್‌, ಖಲೀಲ್ ಅಹಮ್ಮದ್‌, ಶುಭಮನ್ ಗಿಲ್‌, ವಿಜಯಶಂಕರ್‌, ಹಾರ್ದಿಕ್‌ ಪಾಂಡ್ಯ, ಮೊಹಮ್ಮದ್ ಸಿರಾಜ್‌.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸ್‌ (ನಾಯಕ), ಡಗ್‌ ಬ್ರೇಸ್‌ವೆಲ್‌, ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌, ಲೋಕಿ ಫರ್ಗುಸನ್‌, ಸ್ಕಾಟ್‌ ಕುಗೆಲಿಜಿನ್‌, ಕಾಲಿನ್ ಮನ್ರೊ, ಡ್ಯಾರಿಲ್‌ ಮಿಷೆಲ್‌, ಮಿಷೆಲ್‌ ಸ್ಯಾಂಟನರ್‌, ಟಿಮ್‌ ಸೀಫರ್ಟ್‌, ಇಶ್ ಸೋಧಿ, ಟಿಮ್‌ ಸೌಥಿ, ರೋಸ್ ಟೇಲರ್‌, ಬ್ಲೇರ್ ಟಿಕ್ನರ್‌, ಜೇಮ್ಸ್ ನೀಶಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.